Home Home ಸಿ.ಟಿ ರವಿ, ಈಶ್ವರಪ್ಪಗೆ ಅವರ ಪಕ್ಷ ಸ್ವಲ್ಪ ಬುದ್ದಿವಾದ ಹೇಳಲಿ: ಸತೀಶ ಜಾರಕಿಹೋಳಿ

ಸಿ.ಟಿ ರವಿ, ಈಶ್ವರಪ್ಪಗೆ ಅವರ ಪಕ್ಷ ಸ್ವಲ್ಪ ಬುದ್ದಿವಾದ ಹೇಳಲಿ: ಸತೀಶ ಜಾರಕಿಹೋಳಿ

Satish Jarakiholi talking about CT Ravi and Eshwarappa | ಸಿ.ಟಿ ರವಿ, ಈಶ್ವರಪ್ಪಗೆ ಅವರ ಪಕ್ಷ ಸ್ವಲ್ಪ ಬುದ್ದಿವಾದ ಹೇಳಲಿ: ಸತೀಶ ಜಾರಕಿಹೋಳಿ

147
0
SHARE

ಅಥಣಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ ಸಿಟಿ ರವಿ ಮತ್ತು ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಹುಕ್ಕಾಬಾರ ತೆರೆಯುವ ವಿಷಯವಾಗಿರಲಿ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ವಿಚಾರವಾಗಿರಲಿ ಇದರ ಬಗ್ಗೆ ಅವರ ಪಕ್ಷ ಶಿಸ್ತಿನ ಅವರದು ಸಂಸ್ಕೃತಿಯ ಪಕ್ಷ ಎಂದು ಮಾತಿಗೊಮ್ಮೆ ಹೇಳುತ್ತಾರೆ.

ಸಿ ಟಿ ರವಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಈಶ್ವರಪ್ಪ ರಾಜ್ಯದ ಸಚಿವರಾಗಿದ್ದು ಅವರಿಗೆ ಪಕ್ಷ ಕೊಟ್ಟ ಹುದ್ದೆ ದೊಡ್ಡದು ಆದರೆ ಅವರ ಹೇಳಿಕೆಯಿಂದಾಗಿ ಅವರು ಚಿಕ್ಕವರು ಆದ್ದರಿಂದ ಅವರಿಗೆ ಕರೆದು ಬುದ್ದಿ ಹೇಳಲಿ ಎಂದು ಲೇವಡಿ ಮಾಡಿದರು. ಇನ್ನೂ ಇದೆ ವೇಳೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಮಂತ್ರಿಗಿರಿ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ಶಶಿಕಲಾ ಜೊಲ್ಲೆ ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ ಇಂತಹ ಆರೋಪ ಹೊತ್ತವರು ಸಾಕಷ್ಟು ಜನ ಬಿಜೆಪಿ ಪಕ್ಷದಲ್ಲಿ ಇದ್ದಾರೆ ಎಂದರಲ್ಲದೆ ನಿನ್ನೆಯಷ್ಟೆ ಅಥಣಿಯಲ್ಲಿ ಮಾಜಿ ಜಲಸಂಪನ್ಮೂಲ ಸಚೀವ ರಮೇಶ ಜಾರಕಿಹೋಳಿ ಕಳೆದ ಇಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಪ್ರೀತಿ ವಿಶ್ವಾಸ ಸಿಕ್ಕಿರಲಿಲ್ಲಾ ಸಂಘ ಪರವಾರದಿಂದ ಮತ್ತು ಬಿಜೆಪಿ ಹೈಕಮಾಂಡನಿಂದ ಸಿಕ್ಕಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೋಳಿ ಎಷ್ಟು ಲವ್ ಆಗಿದೆ ಎಂದು ರಮೇಶ ಜಾರಕಿಹೋಳಿ ಅವರನ್ನೆ ಕೇಳಿ ಎಷ್ಟು ಅಪ್ಪಿಕೊಂಡಿದ್ದಾರೆ, ಎಷ್ಟು ಪ್ರೀತಿ ವಿಶ್ವಾಸ ಸಿಕ್ಕಿದೆ ಎಂದು ಅವರನ್ನೆ ಕೇಳಿ ಅದಕ್ಕಾಗಿಯೆ ಗೋಕಾಕ ನಿಂದ ಬೆಂಗಳೂರಿಗೆ ಬೆಂಗಳೂರಿನಿಂದ ದೆಹಲಿಗೆ ಅಲೆದಾಡಿಸುತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಸಂಘಟನೆ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಚುನಾವಣೆ ಬಂದಾಗ ಮಾತ್ರ ನಾವು ಪಕ್ಷ ಬಲವರ್ಧನೆ ಮಾಡುವದಿಲ್ಲ ಸದಕಾಲ ಆ ವಿಷಯ ಗಮನಹರಿಸಿದ್ದೇವೆ ಮುಂಬರುವ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಆಸ್ತಿತ್ವಕ್ಕೆ ಬರುವಂತೆ ಕೆಲಸ ಮಾಡುತ್ತಿದ್ದೇವೆ ಎಂದರು.

LEAVE A REPLY

Please enter your comment!
Please enter your name here