ಈದ್ಗಾ ಮೈದಾನಕ್ಕೆ ಮೂರು ದಿನ ಬಿಗಿ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ

ರಾಜಕೀಯ

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಮೈದಾನದ ಬಳಿ ಬಿಗಿ ಬಂದೋಬಸ್ತ್​​ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಕಮಿಷನರ್​​​ ಸಂದೀಪ್​ ಪಾಟೀಲ್​ ನೇತೃತ್ವದಲ್ಲಿ ರೂಟ್​ ಮಾರ್ಚ್ ಮಾಡಿ ಜನರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡುತ್ತಿದ್ಧಾರೆ. ಡಿಸಿಪಿ ಲಕ್ಷ್ಮಣ್​ ನಿಂಬರಗಿ ಸೇರಿ ಎಸಿಪಿ, ಇನ್ಸ್​ಪೆಕ್ಟರ್​ಗಳು ಭಾಗಿಯಾಗಿದ್ಧಾರೆ.

ಮೈದಾನಕ್ಕೆ ಮೂರು ದಿನಗಳ ಕಾಲ ಬಿಗಿ ಬಂದೋಬಸ್ತ್​​​ ನೀಡಲಾಗುತ್ತಿದೆ. 1600 ಮಂದಿ ಪೊಲೀಸರು ಬಂದೋಬಸ್ತ್​ಗೆ ನಿಯೋಜನೆ , RAF, KSRP ಸೇರಿದಂತೆ ವಿವಿಧ ತುಕಡಿಗಳ ನಿಯೋಜನೆ ಮಾಡಲಾಗಿದೆ. ಡ್ರೋನ್​ ಮೂಲಕವೂ ಮೈದಾನದ ಸುತ್ತ ಭದ್ರತೆ ಪರಿಶೀಲನೆ ನಡೆಸಿದ್ಧಾರೆ. ಈ ಬಗ್ಗೆ ಹೆಚ್ಚುವರಿ ಪೊಲೀಸ್ ಕಮಿಷನರ್​​ ಸಂದೀಪ್​ ಪಾಟೀಲ್​​ ಮಾಹಿತಿ ನೀಡಿದ್ಧಾರೆ.

Leave a Reply

Your email address will not be published.