Home District ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ವಿರುದ್ಧ ಕೆಂಡಾಮಂಡಲವಾದ ದೇವದುರ್ಗ ಶಾಸಕ ಶಿವನಗೌಡ ನಾಯಕ್!

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ವಿರುದ್ಧ ಕೆಂಡಾಮಂಡಲವಾದ ದೇವದುರ್ಗ ಶಾಸಕ ಶಿವನಗೌಡ ನಾಯಕ್!

ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ವಿರುದ್ಧ ಕೆಂಡಾಮಂಡಲವಾದ ದೇವದುರ್ಗ ಶಾಸಕ ಶಿವನಗೌಡ ನಾಯಕ್!

615
0

ರಾಯಚೂರು;ದೇವದುರ್ಗ ಶಾಸಕ ಶಿವನಗೌಡ ನಾಯಕ ಲಿಕ್ಕರ, ಮರಳು ಮತ್ತು ಮಟಕಾ ಮಾಫಿಯಾಗಳನ್ನು ನಡೆಸುತ್ತಿದ್ದಾರೆ. ದೊಡ್ಡ ಬ್ರಷ್ಟ ಅವರಾಗಿದ್ದು, ಅವರ ಈ ಮಾಫಿಯಾ ಕಾರ್ಯಗಳಿಗೆ ನಮ್ಮ ನಾಯಕರು ಅಡ್ಡ ಬರುತ್ತಾರೆ ಎಂಬ ಮಾಹಿತಿಯಿಂದ ನಮ್ಮ ಜೆಡಿಎಸ್ ಪಕ್ಷದ ನಾಯಕರುಗಳ ಮೇಲೆ ಇಲ್ಲಸಲ್ಲದ ಸುಳ್ಳು ಕೇಸುಗಳನ್ನು ಮಾಡುತ್ತಿದ್ದಾನೆ. ನಮ್ಮ ದೇವದುರ್ಗ ತಾಲೂಕಾಧ್ಯಕ್ಷರಿಗೆ ಮತ್ತು ಇತರ ನಾಯಕರುಗಳಿಗೆ ಮಾನಸಿಕ ಹಿಂಸೆ ಮಾಡಲಾಗುತ್ತಿದೆ. ಅಲ್ಲಿನ ಪೊಲೀಸರು ಬ್ರಷ್ಟ ಶಿವನಗೌಡನ ಕಪಿಮುಷ್ಟಿಯಲ್ಲಿ ಕೆಲಸ ಮಾಡುತ್ತಿದ್ದು, ಅದಕ್ಕೆ ನಾವು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಕರೋನಾದ ಸಂದರ್ಭ ಇರುವದರಿಂದ ನಮ್ಮ ಹೋರಾಟವನ್ನ ಮನವಿಗೆ ಸೀಮಿತಗೊಳಿಸಿದ್ದೇವೆ.

ಮುಂದಿನ ದಿನಗಳಲ್ಲಿ ಈ ಕುರಿತು ತೀವ್ರ ತರನಾದ ಹೋರಾಟ ಮಾಡಿ, ಲ್ಯಾಂಡ್ ಮಾಫಿಯಾ, ಲಿಕ್ಕರ ಮತ್ತು ಮರಳು ಮಟಕಾ ಮಾಫಿಯಾವನ್ನ ಬಯಲಿಗೆಳೆದು ಅವರ ಭ್ರಷ್ಟಾಚಾರವನ್ನ ಬಯಲಿಗೆ ಎಳೆಯುತ್ತೇವೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಹೇಳಿದರು.ದೇವದುರ್ಗದಲ್ಲಿ ಶಾಸಕರ ಕುಮ್ಮಕ್ಕಿನಿಂದ ಪೊಲೀಸ್‌ರು ಅವರ ಕೈಗೊಂಬೆಗಳಾಗಿ ನಮ್ಮ ಪಕ್ಷದ ನಾಯಕರುಗಳ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ನಮ್ಮ ನಾಯಕರುಗಳ ಮೇಲೆ ಸುಳ್ಳೇ ಕೇಸ್‌ಗಳನ್ನ ದಾಖಲಿಸುತ್ತಿದ್ದಾರೆ. ಗಬ್ಬರೂ ಕಲ್ಲಿನ ಕ್ವಾರಿಯಲ್ಲಿ ಸತ್ತ ಹುಡುಗನ ಕೊಲೆಯನ್ನ ನಮ್ಮ ತಾಲೂಕ ಅಧ್ಯಕ್ಷ ಬುಡ್ಡನಗೌಡರ ಮೇಲೆ ಹಾಕಿ ಶಾಸಕರ ಕುಮ್ಮಕ್ಕಿನಿಂದ ಕೇಸ್ ದಾಖಲಿಸಲಾಗಿದೆ.

ಇದರ ಸತ್ಯಾಸತ್ಯತೆಯನ್ನ ಸಂಪೂರ್ಣ ತನಿಖೆ ಮಾಡಿ ಸುಳ್ಳೇ ದಾಖಲಾಗಿರುವ ಕೇಸ್‌ನ ಬಗ್ಗೆ ಜಿಲ್ಲಾ ಪೊಲಿಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೆಕೆಂದು ಒತ್ತಾಯಿಸಿ ಜೆಡಿಎಸ್ ಪಕ್ಷದಿಂದ ಮನವಿ ಸಲ್ಲಿಸಿದ್ದೇವೆ ಎಂದು ದೇವದುರ್ಗ ವಿಧಾನಸಭೆ ಕ್ಷೇತ್ರದ ನಾಯಕಿ ಶ್ರೀಮತಿ ಕರಿಯಮ್ಮ ಆರೋಪಿಸಿದರು.ಮನವಿ ಸ್ವಿಕರಿಸಿ ಮಾತನಾಡಿದ ಜಿಲ್ಲಾ ಎಸ್‌ಪಿ ಪ್ರಕಾಶ ನಿಕ್ಕಂ ಈ ಬಗ್ಗೆ ಕೂಲಂಕುಶ ತನಿಖೆ ನಡೆಸಿ ಪರಿಶೀಲನೆ ನಡೆಸಲಾಗುವುದು. ಗಬ್ಬೂರಿನ ಕೇಸ್‌ನ ಕುರಿತು ನಿಖರವಾದ ತನಿಖೆ ನಡೆಸಲಾಗುವುದು ಎಂದು ಹೇಳಿದರು.

VIAಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ವಿರುದ್ಧ ಕೆಂಡಾಮಂಡಲವಾದ ದೇವದುರ್ಗ ಶಾಸಕ ಶಿವನಗೌಡ ನಾಯಕ್!
SOURCEಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ವಿರುದ್ಧ ಕೆಂಡಾಮಂಡಲವಾದ ದೇವದುರ್ಗ ಶಾಸಕ ಶಿವನಗೌಡ ನಾಯಕ್!
Previous articleದೇವದುರ್ಗ ಶಾಸಕರ ವಿರುದ್ಧ ಕೆಂಡಾಮಂಡಲವಾದ ಕಾಂಗ್ರೇಸ್ ನಾಯಕಿ ಶ್ರೀದೇವಿ ನಾಯಕ್!
Next articleಹಾಸಿಗೆ ಸಿಗದೇ ನೆಲದಮೇಲೆ ಮಲಗಿದ ಜನ; ಆಸ್ಪತ್ರೆಯಲ್ಲಿ ಕಂಡುಬಂದ ಮನಮಿಡಿಯುವ ದೃಶ್ಯ

LEAVE A REPLY

Please enter your comment!
Please enter your name here