Home Cinema ‘ಸೆಂಚುರಿಸ್ಟಾರ್’ ಹುಟ್ಟುಹಬ್ಬಕ್ಕೆ ಭಜರಂಗಿ-2 ಟೀಸರ್ ಔಟ್… ನಯಾ ಅವತಾರದಲ್ಲಿ ಬಂದ್ರು ‘ಕರುನಾಡ ಚಕ್ರವರ್ತಿ’..!

‘ಸೆಂಚುರಿಸ್ಟಾರ್’ ಹುಟ್ಟುಹಬ್ಬಕ್ಕೆ ಭಜರಂಗಿ-2 ಟೀಸರ್ ಔಟ್… ನಯಾ ಅವತಾರದಲ್ಲಿ ಬಂದ್ರು ‘ಕರುನಾಡ ಚಕ್ರವರ್ತಿ’..!

435
0
SHARE

ಬೆಂಗಳೂರು.  ಇಂದು ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್‌ಗೆ ಹುಟ್ಟುಹಬ್ಬದ ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟಿರೋ ಶಿವಣ್ಣ, ಈ ಸಲ ಅದ್ಧೂರಿಯಾಗಿ ಹುಟ್ಟುಹಬ್ಬದ ಆಚರಣೆಗೆ ಬಿಗ್ ಬ್ರೇಕ್ ಹಾಕಿದ್ದಾರೆ. ತಮ್ಮ ನಾಗಾವರದ ಮನೆಯಲ್ಲಿ ಪತ್ನಿ ಗೀತಾ ಶಿವರಾಜ್‌ಕುಮಾರ್ ಜೊತೆಗೆ ಸರಳವಾಗಿ ಕೇಕ್ ಕತ್ತರಿಸೋದರ ಮೂಲಕ ಸೆಲೆಬ್ರೆಟ್ ಮಾಡಿದ್ದಾರೆ.

ಈ ಹಿಂದೆ ತಮ್ಮ ಫೇಸ್‌ಬುಕ್‌ನಲ್ಲಿ ವಿಡಿಯೋ ಹರಿಬಿಟ್ಟಿದ್ದ ಶಿವರಾಜ್‌ಕುಮಾರ್, ಅಭಿಮಾನಿಗಳು ಮನೆಗೆ ಬಾರದಂತೆ ಮನವಿ ಮಾಡಿಕೊಂಡಿದ್ರು. ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿಯೇ ನನಗೆ ವಿಶ್ ಮಾಡಿ ಎಂದಿದ್ರು. ಇದೀಗ ಶಿವರಾಜ್‌ಕುಮಾರ್ ಬರ್ತಡೇ ಸಡಗರಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳನ್ನ ಕೋರಿದ್ದಾರೆ.

ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದ ನಡುವೆ ಕಿಚ್ಚು ಹಚ್ಚುವಂತೆ ಬಹುನಿರೀಕ್ಷಿತ ಸಿನಿಮಾ ಭಜರಂಗಿ-2 ಚಿತ್ರದ ಟೀಸರ್ ರಿಲೀಸ್ ಆಗಿದೆ.

ಎ.ಹರ್ಷ ನಿರ್ದೆಶನದ ಭಜರಂಗಿ-2ನಲ್ಲಿ ಶಿವಣ್ಣ ಹೊಸ ರೂಪದಲ್ಲಿ ಮಿಂಚುತ್ತಿದ್ದಾರೆ. ಪಕ್ಕಾ ಮಾಸ್ ಲುಕ್‌ನಲ್ಲಿ ನಟ ಶಿವರಾಜ್‌ಕುಮಾರ್ ಕಾಣಿಸಿಕೊಂಡ ಕಾರಣಕ್ಕೆ ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟಾಗಿದೆ.

 

LEAVE A REPLY

Please enter your comment!
Please enter your name here