Home Latest ಹೇಳುವುದು ಒಂದು ಮಾಡುವುದು ಇನ್ನೊಂದು; ರೂಲ್ಸ್ ಬ್ರೇಕ್ ಸಂಸದೆ ಯಾರು ಗೊತ್ತೇ!

ಹೇಳುವುದು ಒಂದು ಮಾಡುವುದು ಇನ್ನೊಂದು; ರೂಲ್ಸ್ ಬ್ರೇಕ್ ಸಂಸದೆ ಯಾರು ಗೊತ್ತೇ!

ಹೇಳುವುದು ಒಂದು ಮಾಡುವುದು ಇನ್ನೊಂದು; ರೂಲ್ಸ್ ಬ್ರೇಕ್ ಸಂಸದೆ ಯಾರು ಗೊತ್ತೇ!

590
0

ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ಮಾತು ಬಿಜೆಪಿಯವರಿಗೆ ಪಕ್ಕಾ ಸೂಟ್ ಆಗುತ್ತೆ. ಕೊರೋನಾ ಕಾಲದಲ್ಲಿ ಪ್ರತಿಭಟನೆ ಮಾಡಬಾರದು, ಜನ ಸೇರಬಾರದು ಎಂಬೂದು ಮಾರ್ಗಸೂಚಿ. ತಾನೇ ಹೊರಡಿಸಿದ ನಿಯಮವನ್ನು ಇದೀಗ ತಾನೇ ಉಲ್ಲಂಘನೆ ಮಾಡಿ ವಿಪಕ್ಷದ ಆಕ್ರೋಷಕ್ಕೆ ಪಾತ್ರವಾಗಿದೆ.

ಇಡೀ ದೇಶದಲ್ಲಿ ಕೋರೊನಾ ರಣಕೇಕೆ ಹಾಕುತ್ತಿದೆ. ಎಲ್ಲೂ ಜನ ಸೇರಬಾರದು, ಪ್ರತಿಭಟನೆ ಮಾಡಬಾರದು ಅಂತ ಕೇಂದ್ರ ಸರಕಾರವೇ ಆದೇಶ ಹೊರಡಿಸಿದೆ. ಆದ್ರೆ ತನ್ನ ಆದೇಶವನ್ನು ತನ್ನ ಪಕ್ಷದ ಸದಸ್ಯರು ಉಲ್ಲಂಘನೆ ಮಾಡಿದ್ದಾರೆ. ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಗೆ ಮಾತ್ರ ಪ್ರತಿಭಟನೆಯಲ್ಲಿ ಬಿಸಿಯಾಗಿದ್ದರು. ಉಡುಪಿ ಬಿಜೆಪಿ ಕಚೇರಿ ಮುಂಭಾಗ ಪಶ್ಚಿಮ ಬಂಗಾಳದಲ್ಲಿ ಮತೀಯ ಗಲಭೆಗೆ ವಿರುದ್ಧ ಪ್ರತಿಭಟನೆ ನಡೆಸಿದ್ರು. ಒಂದು ಕೋಮಿನ ಜನ ಕೊಲೆ, ಗೂಂಡಾಗಿರಿಯಲ್ಲಿ ತೊಡಗಿದ್ದಾರೆ. ಬಿಜೆಪಿ ಕಚೇರಿ, ಎಬಿವಿಪಿ ಕಚೇರಿಗೆ ಬೆಂಕಿ ಹಚ್ಚುತ್ತಿದ್ದಾರೆ. ಇಂತಹ ಗೂಂಡಾಗಿರಿ ದೇಶ ಹಿಂದೆಂದೂ ಕಂಡಿಲ್ಲ ಅಂತ ಮಮತಾ ಬ್ಯಾನರ್ಜಿ ವಿರುದ್ಧ ಅಸಮಾಧಾನ ಹೊರ ಹಾಕಿದರು.

ಉಡುಪಿಯ ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶೋಭಾ ಕರಂದ್ಲಾಜೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಶೆಟ್ಟಿ ಸೇರಿದಂತೆ ಸುಮಾರು ಹದಿನೈದು ಜನ ಬಿಜೆಪಿಯ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರದ ಮಾರ್ಗಸೂಚಿಯನ್ನು ಶೋಭಾ ಕರಂದ್ಲಾಜೆಯವರೇ ಉಲ್ಲಂಘನೆ ಮಾಡಿದ್ದಾರೆ. ಡಿಸಿಯವರು ಶೋಭಾ ಕರಂದ್ಲಾಜೆ ವಿರುದ್ಧ ಕೇಸು ದಾಖಲಿಸಬೇಕು ಎಂದು ಉಡುಪಿ ಕಾಂಗ್ರೆಸ್ ಒತ್ತಾಯಿಸಿದೆ.

ಪಶ್ಚಿಮ ಬಂಗಾಳದಲ್ಲಿ ಆಗುತ್ತಿರುವ ಬೆಳವಣಿಗೆ ವಿರುದ್ಧ ಸಾಂಕೇತಿಕವಾಗಿ ಇಡೀ ದೇಶಾದ್ಯಂತ ಪ್ರತಿಭಟನೆ ಮಾಡುವಂತೆ ಬಿಜೆಪಿ ಕರೆ ನೀಡಿತ್ತು. ಇದೀಗ ತಾನೇ ನಿಯಮ ಉಲ್ಲಂಘಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

VIAಹೇಳುವುದು ಒಂದು ಮಾಡುವುದು ಇನ್ನೊಂದು; ರೂಲ್ಸ್ ಬ್ರೇಕ್ ಸಂಸದೆ ಯಾರು ಗೊತ್ತೇ!
SOURCEಹೇಳುವುದು ಒಂದು ಮಾಡುವುದು ಇನ್ನೊಂದು; ರೂಲ್ಸ್ ಬ್ರೇಕ್ ಸಂಸದೆ ಯಾರು ಗೊತ್ತೇ!
Previous articleಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಕೋವಿಡ್  ಸೋಂಕಿತರನ್ನು ಖುದ್ದಾಗಿ ಭೇಟಿ‌ ಮಾಡಿದ ಸಚಿವ ಸುರೇಶ್ ಕುಮಾರ್
Next articleರಾಜಕೀಯ ಮಾಡುವುದಾದರೆ ಮಾತ್ರ ಪ್ರತ್ಯಕ್ಷರಾಗುವ ಈ ನಾಯಕರು ನಮಗೆ ಬೇಕೇ?; ವಿಶ್ವಾಸ್ ಅಮೀನ್, ಕಾಂಗ್ರೆಸ್ ಮುಖಂಡ

LEAVE A REPLY

Please enter your comment!
Please enter your name here