Home KARNATAKA ಅಕಾಲಿಕವಾಗಿ ಲಾಕ್ ಡೌನ್ ಘೋಷಣೆ ಮಾಡಿದ್ದರು ಅದರಿಂದ ಹೆಲ್ತ್ ಹಾಳಾಯ್ತು ಎಕನಾಮಿನೂ ಹಾಳಾಯ್ತು; ಸಿದ್ದರಾಮಯ್ಯ ಕಿಡಿ

ಅಕಾಲಿಕವಾಗಿ ಲಾಕ್ ಡೌನ್ ಘೋಷಣೆ ಮಾಡಿದ್ದರು ಅದರಿಂದ ಹೆಲ್ತ್ ಹಾಳಾಯ್ತು ಎಕನಾಮಿನೂ ಹಾಳಾಯ್ತು; ಸಿದ್ದರಾಮಯ್ಯ ಕಿಡಿ

323
0
SHARE

ಬೆಂಗಳೂರು. ಬೆಂಗಳೂರಿನ ಶಾಸಕರನ್ನ ಯಾಕೆ ಕರೆದಿದ್ದಾರೋ ಗೊತ್ತಿಲ್ಲ ಎಂದು ಸರ್ವಪಕ್ಷ ಶಾಸಕರ ಸಭೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ .ಬೆಂಗಳೂರಿನಲ್ಲಿ ಮಾತನಾಡಿದ ಅವರು ಅಕಾಲಿಕವಾಗಿ ಲಾಕ್ ಡೌನ್ ಘೋಷಣೆ ಮಾಡಿದ್ದರು ಅದರಿಂದ ಹೆಲ್ತ್ ಹಾಳಾಯ್ತು ಮತ್ತು ಎಕನಾಮಿನೂ ಹಾಳಾಯ್ತು ಎಂದಿದ್ದಾರೆ.

ಯಾವ ಮುಂಜಾಗ್ರತಾ ಕ್ರಮವನ್ನು ಕೂಡ ಕಟ್ಟುನಿಟ್ಟಾಗಿ ತಗೆದುಕೊಳ್ಳದಿರುವುದರಿಂದ ಕರೋನಾ ಸೋಂಕು ಹೆಚ್ಚಾಗಿದೆ.ಹೆಚ್ಚು ಜನರಿಗೆ ಟೆಸ್ಟ್ ಮಾಡುತ್ತಾ ಹೋದರೆ ಇನ್ನು ಹೆಚ್ಚು ಪ್ರಕರಣಗಳು ಕಂಡು ಬರಬಹುದು.ಸರ್ಕಾರ ಕರೋನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ‌ ಎಂದು ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

ಆಗ ಲಾಕ್ ಡೌನ್ ಮಾಡಿದ್ದು ತಪ್ಪು.ನಿಜವಾಗಲು ಈಗ ಲಾಕ್ ಡೌನ್ ಮಾಡಬೇಕಿತ್ತು ಎಂದು ಅವರು ಸಲಹೆ ನೀಡಿದ್ದಾರೆ.

LEAVE A REPLY

Please enter your comment!
Please enter your name here