Home District ಮೊದಲು ಒತ್ತುವರಿ ತೆರವಿಗೆ ಆದೇಶ! ಈಗ ಕಟ್ಟಡಗಳ ನೆಲಸಮಕ್ಕೆ ಹೈಕೋರ್ಟ್ ಸೂಚನೆ! ಏನಿದು ಸಿಗಂದೂರು ದೇಗುಲದ...

ಮೊದಲು ಒತ್ತುವರಿ ತೆರವಿಗೆ ಆದೇಶ! ಈಗ ಕಟ್ಟಡಗಳ ನೆಲಸಮಕ್ಕೆ ಹೈಕೋರ್ಟ್ ಸೂಚನೆ! ಏನಿದು ಸಿಗಂದೂರು ದೇಗುಲದ ಪ್ರಕರಣ?

539
0
SHARE

ಮೊದಲು ಒತ್ತುವರಿ ತೆರವಿಗೆ ಆದೇಶ! ಈಗ ಕಟ್ಟಿದ ಕಟ್ಟಡಗಳನ್ನು ನೆಲಸಮ ಮಾಡಲು ಹೈಕೋರ್ಟ್ ಸೂಚನೆ! ಏನಿದು ಸಿಗಂದೂರು ದೇಗುಲದ ಆವರಣದ ಪ್ರಕರಣ? ಇಲ್ಲಿದೆ ಸಂಪೂರ್ಣ ವರದಿ.

ಸಿಗಂದೂರು ದೇಗುಲದ ಆವರಣದಲ್ಲಿ ನಿರ್ಮಾಣ ಮಾಡಲಾದ ಅಕ್ರಮವಾಗಿ ಕಟ್ಟಡಗಳನ್ನು ಒಂದು ತಿಂಗಳಿನಲ್ಲಿ ನೆಲಸಮಗೊಳಿಸಿ, ಸರ್ಕಾರದ ವಶಕ್ಕೆ ನೀಡುವಂತೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ಪೀಠ ಆದೇಶಿಸಿದೆ.
ಏನಿದು ಪ್ರಕರಣ!?; ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಸರ್ವೆ ನಂಬರ್ 65 ರ ಸರ್ಕಾರಿ ಅರಣ್ಯ ಭೂಮಿಯಲ್ಲಿ, ದೇವಸ್ಥಾನದ ಹೆಸರಲ್ಲಿ ಒತ್ತುವರಿ ಮಾಡಿ, ಅಕ್ರಮವಾಗಿ ಕಟ್ಟಡಗಳನ್ನು ಕಟ್ಟಲಾಗಿದೆ ಎನ್ನುವ ಆರೋಪವಿತ್ತು. ಈ ಸಂಬಂಧ ಒತ್ತುವರಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಹೈಕೋರ್ಟ್ನಲ್ಲಿ ಅರ್ಜಿಸಲ್ಲಿಸಲಾಗಿತ್ತು. ಸಾಗರ ತಾಲೂಕಿನ ಕೆ.ಎಸ್. ಲಕ್ಷ್ಮೀ ನಾರಾಯಣ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್ನ ಸೂಚನೆಯಂತೆ ಜಿಲ್ಲಾಡಳಿತ ಗ್ರಾಮದ ಸರ್ವೆ ನಂಬರ್ 65 ರಲ್ಲಿ 12 ಎಕೆರೆ 16 ಗುಂಟೆ ಜಾಗ ಒತ್ತುವರಿ ಮಾಡಲಾಗಿದೆ ಎಂದು ತಿಳಿಸಿತ್ತು.

ಈ ಕುರಿತು ಈ ವಿಚಾರಣೆ ಮುಂದುವರಿಸಿದ್ದ ಹೈಕೋರ್ಟ್ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು ಎಂದು ಸೂಚಿಸಿತ್ತು. ಕಟ್ಟಡಗಳಿರುವ ಜಾಗವನ್ನು ಹೊರತುಪಡಿಸಿ ಉಳಿದ ಜಾಗವನ್ನು ಸರ್ಕಾರದ ವಶಕ್ಕೆ ನೀಡಬೇಕು ಎಂದು ತಿಳಿಸಿತ್ತು. ಇದರ ಬೆನ್ನಲ್ಲೆ ಇದೀಗ ಒತ್ತುವರಿ ಮಾಡಿದ ಜಾಗದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನೆಲಸಮ ಮಾಡಿ ಒಂದು ತಿಂಗಳಿನಲ್ಲಿ ಭೂಮಿಯನ್ನ ಸರ್ಕಾರದ ವಶಕ್ಕೆ ನೀಡಬೇಕು ಎಂದು ಸೂಚಿಸಿದೆ.

LEAVE A REPLY

Please enter your comment!
Please enter your name here