Home Crime ಕೊರೋನಾ ನಿಯಂತ್ರಣದ ಬಗ್ಗೆ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದೇನು?

ಕೊರೋನಾ ನಿಯಂತ್ರಣದ ಬಗ್ಗೆ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದೇನು?

State minister Srimanta Patil talking about Corona | ಕೊರೋನಾ ನಿಯಂತ್ರಣದ ಬಗ್ಗೆ ಸಚಿವ ಶ್ರೀಮಂತ ಪಾಟೀಲ್ ಹೇಳಿದ್ದೇನು?

334
0
SHARE

ಕಾಗವಾಡ :ಕ್ಷೇತ್ರದಲ್ಲಿ ಕೊರೋನಾ ನಿಯಂತ್ರಣ ಕಾರ್ಯ ಭರದಿಂದ ಸಾಗುತ್ತಿದೆ ಯಾವುದೇ ಆತಂಕದ ವಾತಾವರಣ ಇಲ್ಲ ಎಂದು ರಾಜ್ಯ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ ತಿಳಿಸಿದರು.

ಕೆಂಪವಾಡ ತಮ್ಮ ಸ್ವಗೃಹದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಆಕ್ಸಿಜನ್ ಹಾಗೂ ಬೆಡ್ ಗಳ ಕೊರತೆ ಕಾಗವಾಡ ಕ್ಷೇತ್ರದಲ್ಲಿ ಎಲ್ಲೂ ಇಲ್ಲ ಅವುಗಳಿಗೆ ಸಮರ್ಪಕವಾದ ವ್ಯವಸ್ಥೆ ಮಾಡಿ ಪರಿಸ್ಥಿತಿ ಹತೋಟಿಗೆ ತಂದಿದ್ದೇವೆ ಎಂದು ತಿಳಿಸಿದರು.

ಈಗಾಗಲೆ ಕಾಗವಾಡ ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನು ಕೆಲವು ಕಡೆಗಳಲ್ಲಿ ತೆರೆದು ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ
ಅಲ್ಲದೆ ಕೋವಿಡ್ ಲಸಿಕಾಕರಣದ ಕಾರ್ಯ ವೇಗವಾಗಿ ನಡೆಯಬೇಕಾಗಿದೆ ಈ ಕುರಿತು ಈಗಾಗಲೇ ಕೇಂದ್ರ ಸರ್ಕಾರದಿಂದಲೂ ಮನವಿ ಮಾಡಲಾಗಿದೆ ಎಂದು ಹೇಳಿದರು.

ಯಾರು ಸಹ ಲಸಿಕೆ ಪಡೆಯದೆ ಹಿಂದುಳಿಯಬಾರದು ಎಲ್ಲರೂ ಲಸಿಕೆ ಪಡೆದು ಕೊರೋನಾ ತೊಲಗಿಸಬೇಕಾಗಿದೆ ಎಂದು ಸಾರ್ವಜನಿಕರಲ್ಲಿ ವ್ಯಾಕ್ಸಿನ್ ಕುರಿತು ಜಾಗೃತಿ ಮೂಡಿಸಿದರು.

LEAVE A REPLY

Please enter your comment!
Please enter your name here