ವಿದ್ಯಾರ್ಥಿಯೊಂದಿಗೆ ಶಾಲೆಯಲ್ಲಿ ಸೆಕ್ಸ್ ಮಾಡಿ ಸಿಕ್ಕಿ ಬಿದ್ದ ‘ವರ್ಷದ ಉತ್ತಮ ಶಿಕ್ಷಕಿ’ ಅರೆಸ್ಟ್

ಅಂತರಾಷ್ಟ್ರೀಯ

ವಾಷಿಂಗ್ಟನ್: ವರ್ಷದ ಉತ್ತಮ ಶಿಕ್ಷಕಿ ಎಂದು ಪ್ರಶಸ್ತಿ ಪಡೆದಿದ್ದ ಪಿಟಿ ಟೀಚರ್ ಒಬ್ಬರು 17 ವರ್ಷದ ಅದೇ ಶಾಲೆಯ ವಿದ್ಯಾರ್ಥಿಯೊಂದಿಗೆ ಶಾಲೆಯಲ್ಲೇ ಸೆಕ್ಸ್ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.

ಅಮೆರಿಕದ ಜೆಂಟ್ರಿ ಇಂಟರ್ ಮೀಡಿಯೇಟ್ ಶಾಲೆಯಲ್ಲಿ ಪಿಟಿ ಟೀಚರ್ ಆಗಿರುವ ಲಿಯಾ ಕ್ವೀನ್ ತನ್ನದೇ ಶಾಲೆಯ 17ರ ವಿದ್ಯಾರ್ಥಿಯೊಂದಿಗೆ ತಮ್ಮ ಕಚೇರಿಯಲ್ಲೇ ಲೈಂಗಿಕ ಕ್ರಿಯೆ ನಡೆಸಿದ್ದಳು ಎಂದು ಆರೋಪಿಸಲಾಗಿದ್ದು, ಇದೇ ಸೆಪ್ಟೆಂಬರ್ 15ರಂದು ಆಕೆಯನ್ನು ಬಂಧಿಸಲಾಗಿದೆ. ಶಿಕ್ಷಕಿಯ ಡ್ರಗ್ಸ್ ಸೇವಿಸಿದ ಆರೋಪವೂ ಇದೆ. 12 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, 40 ಲಕ್ಷ ರೂ.ಗಳನ್ನು ಪಾವತಿಸಿದ ನಂತರ, ಲಿಯಾಳನ್ನು ಸೆಪ್ಟೆಂಬರ್ 17 ರಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ಜೆಂಟ್ರಿ ಪೊಲೀಸರು ಹೇಳುವಂತೆ, 2010ರ ಘಟನೆಯ ಮೇಲೆ ಲಿಯಾಳನ್ನು ಬಂಧಿಸಲಾಯಿತು. ಆಗ ಈಕೆ 17 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ, ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದರು ಎನ್ನಲಾಗಿದ್ದು, ಇದೀಗ ಈ ವಿಷಯ ಬಹಿರಂಗವಾಗಿದೆ.  ಲಿಯಾ ಕ್ವೀನ್ ಕಳೆದ 20 ವರ್ಷಗಳಿಂದಲೂ ಜೆಂಟ್ರಿ ಶಾಲೆಯಲ್ಲಿ ಕೆಲಸ ಮಾಡಿದ್ದ ಲಿಯಾ ಟೀಚರ್ ಆಫ್ ದಿ ಇಯರ್ ಪ್ರಶಸ್ತಿಯನ್ನೂ ಪಡೆದಿದ್ದಳು. ಸದ್ಯ ಆಕೆಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಬಾಸ್ಕೆಟ್ ಬಾಲದ ಆಟದ ಮೂಲಕ ವಿದ್ಯಾರ್ಥಿಯೊಂದಿಗೆ ಲಿಯಾ ಸ್ನೇಹ ಬೆಳೆಸಿದ್ದಳು. ಆ ಸಮಯದಲ್ಲಿ ಹುಡುಗನಿಗೆ 17 ವರ್ಷ ವಯಸ್ಸಾಗಿತ್ತು. ನಂತರ ಲಿಯಾ ಮತ್ತು ಹುಡುಗ ಶಾಲೆ ಬಿಟ್ಟ ನಂತರ ಹೊರಗಡೆಯೂ ಕಾಣಿಸಿಕೊಂಡಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಸಂವಹನ ನಡೆಸಿದ್ದರು. 2010ರ ಬೇಸಿಗೆ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಲೈಂಗಿಕವಾಗಿ ಅವರು ಬಳಸಿಕೊಂಡಿದ್ದಳು. 17 ವರ್ಷದ ವಿದ್ಯಾರ್ಥಿಯನ್ನು ಲಿಯಾ ತಮ್ಮ ಶಾಲಾ ಕಚೇರಿಯ ಬಾತ್‌ರೂಮ್‌ನಲ್ಲಿ ಲೈಂಗಿಕ ಚಟುವಟಿಕೆಗಾಗಿ ಬಳಸಿಕೊಂಡಿದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿದೆ.