Home District ಪತಿಗೆ ಕೋರೊನಾ ದೃಢ; ಹೆದರಿದ ಪತ್ನಿ ಆತ್ಮಹತ್ಯೆ

ಪತಿಗೆ ಕೋರೊನಾ ದೃಢ; ಹೆದರಿದ ಪತ್ನಿ ಆತ್ಮಹತ್ಯೆ

889
0

ಚಾಮರಾಜನಗರ : ತಾಲ್ಲೂಕಿನ ಹೆರವೆ ಹೋಬಳಿಯ ಗೋವಿಂದವಾಡಿ (ಕಲ್ಪುರ) ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೇಶಿಗೌಡನಪುರ ಗ್ರಾಮದಲ್ಲಿ ಪತಿಗೆ ಕೋರೊನಾ ಸೋಂಕು ದೃಡವಾಗಿದ್ದನ್ನು ಕಂಡ ಪತ್ನಿ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ದೇಶಿಗೌಡನಪುರ ಗ್ರಾಮದ ಚಿನ್ನಪ್ಪರವರಿಗೆ ಕೋರೊನಾ ಸೋಂಕು ದೃಡವಾಗಿರುವ ಬಗ್ಗೆ ಅಧಿಕೃತ ಮಾಹಿತಿ ಬಂದ ಹಿನ್ನಲೆಯಲ್ಲಿ ಕೋರೊನಾ ಮಹಾಮಾರಿಗೆ ಹೆದರಿದ ಅವರ ಪತ್ನಿಶಿವಮ್ಮ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಮೃತ ಶಿವಮ್ಮರವರ ಆಂತ್ಯ ಸಂಸ್ಕಾರವನು ಸ್ವತಃ ಜಿಲ್ಲಾ ಪಂಚಾಯ್ತಿ ಸದಸ್ಯ ಕೆರಹಳ್ಳಿ ನವೀನ್ ಪಿಪಿ ಕಿಟ್ ಧರಿಸಿಕೊಂಡು ಇತರರೊಂದಿಗೆ ನೆರವೇರಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜಿಲ್ಲೆಯಲ್ಲಿ ಸಕ್ರೀಯ ಕೋರೋನಾ ಸೋಂಕಿತರ ಸಂಖ್ಯೆ 2312 ಕ್ಕೇರಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಕೋರೊನಾ ಸೋಂಕಿನಿಂದ ಗುಣಮುಖರಾಗಿ 238 ಮಂದಿ ಬಿಡುಗಡೆಹೊಂದಿದ್ದು, ಇದೂವರೆಗೂ ಕೋರೊನಾ ಸೋಂಕಿನಿಂದ 8534 ಮಂದಿ ಗುಣಮುಖರಾಗಿದ್ದಾರೆ . ಶುಕ್ರವಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯಿಂದ 388 ಹಾಗೂ ರ್ಯಾಪಿಡ್ ಪರೀಕ್ಷೆಯಿಂದ 32 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ .

ಶುಕ್ರವಾರ ಹೊಸದಾಗಿ ಕೋರೊನಾ ಸೋಂಕು ಪತ್ತೆಯಾದ 420 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನಲ್ಲಿ 126 , ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 99 , ಕೋಳ್ಳೆಗಾಲ ತಾಲ್ಲೂಕಿನಲ್ಲಿ 114 , ಹನೂರು ತಾಲ್ಲೂಕಿನಲ್ಲಿ 57 , ಯಳಂದೂರು ತಾಲ್ಲೂಕಿನಲ್ಲಿ 23 ಹಾಗೂ ಹೊರ ಜಿಲ್ಲೆಯ ಒಬ್ಬರು ಸೇರಿದಂತೆ 420 ಮಂದಿಗೆ ಕೋರೊನಾ ಸೋಂಕು ದೃಡವಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಗುರುವಾರ 1881 ಮಂದಿ ಕೋರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದು, ಇದೂವರೆಗೂ 148832 ಮಂದಿ ಕೊರೊನಾ ನಿಯಂತ್ರಣ ಲಸಿಕೆ ಹಾಕಿಸಿಕೊಂಡಿದ್ದಾರೆ .

Previous articleಬೋಗಸ್ ಬಿಲ್ ಬರೆಯಲು ಒತ್ತಾಯಿಸಿ ಪಿಡಿಓ ಮೇಲೆ ಮಾರಣಾಂತಿಕ ಹಲ್ಲೆ; ವಿಡಿಯೋ ವೈರಲ್
Next articleಆರೋಗ್ಯ ಸೇವೆಗೆ ಸಾರಿಗೆ ಸೌಲಭ್ಯ: ಡಿಸಿಎಂ ಸವದಿ

LEAVE A REPLY

Please enter your comment!
Please enter your name here