
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ
ಮಂಡ್ಯ: ವರದಕ್ಷಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಾರಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ಸಹನ ವರದಕ್ಷಿಣೆ ಭೂತಕ್ಕೆ ಬಲಿಯಾದ ಮಹಿಳೆ. ಕಳೆದು 9 ವರ್ಷಗಳ ಹಿಂದೆ ಕಿಕ್ಕೇರಿ ಹೋಬಳಿಯ ಹೊಡಕಹಳ್ಳಿ ಗ್ರಾಮದ ಮಂಜುನಾಥ್ ಪುತ್ರಿ ಸಹನ ಅವರನ್ನು ಕಾರಿಗನಹಳ್ಳಿ ಗ್ರಾಮದ ಮಧು ಎಂಬಾತನಿಗೆ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ವೇಳೆ ಸಾಕಷ್ಟು ಹಣ, ಬಂಗಾರ ನೀಡಿದ್ದರು ಮತ್ತೆ ಮತ್ತೆ ಹಣ ತರುವಂತೆ ಸಹನಗೆ ಗಂಡನ ಮನೆಯಲ್ಲಿ ಕಿರುಕುಳ ನೀಡಲು ಆರಂಭಿಸಿದ್ದರು.
ವರದಕ್ಷಿಣೆ ತರುವಂತೆ ನಿತ್ಯ ಗಂಡ ಹಿಂಸೆ ನೀಡುತ್ತಿದ್ದು ಇದರಿಂದ ಬೇಸತ್ತಿದ್ದ ಸಹನ ನಿನ್ನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಹೆಂಡತಿ ಸಾವಿನ ಮನೆ ಸೇರುತ್ತಿದ್ದರಂತೆ ಮಧು ಹಾಗೂ ಕುಟುಂಬಸ್ಥರು ಮನೆ ಬಿಟ್ಟು ಪರಾರಿಯಾಗಿದ್ದಾರೆ. ಗೃಹಣಿ ಸಾವಿನ ಸುತ್ತಾ ಅಲವು ಅನುಮಾನಗಳ ವ್ಯಕ್ತವಾಗಿದ್ದು ಪ್ರಕರಣ ದಾಖಲಿಸಿಕೊಂಡಿರೋ ಕಿಕ್ಕೇರಿ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.