Home District ಲಾಕ್ ಡೌನ್ ಮಾಡದೇ ಇದ್ದರೇ ಕೊರೋನಾ ಚೈನ್ ಲಿಂಕ್ ತುಂಡರಿಸುವುದು ಕಷ್ಟ; ಸಚಿವ ಎಸ್.ಸುರೇಶ್ ಕುಮಾರ್

ಲಾಕ್ ಡೌನ್ ಮಾಡದೇ ಇದ್ದರೇ ಕೊರೋನಾ ಚೈನ್ ಲಿಂಕ್ ತುಂಡರಿಸುವುದು ಕಷ್ಟ; ಸಚಿವ ಎಸ್.ಸುರೇಶ್ ಕುಮಾರ್

ಲಾಕ್ ಡೌನ್ ಮಾಡದೇ ಇದ್ದರೇ ಕೊರೋನಾ ಚೈನ್ ಲಿಂಕ್ ತುಂಡರಿಸುವುದು ಕಷ್ಟ; ಸಚಿವ ಎಸ್.ಸುರೇಶ್ ಕುಮಾರ್

363
0

ಲಾಕ್ ಡೌನ್ ಮಾಡದೇ ಇದ್ದರೇ ಕೊರೋನಾ ಚೈನ್ ಲಿಂಕ್ ತುಂಡರಿಸುವುದು ಕಷ್ಟ, ಜನತಾ ಕರ್ಫ್ಯೂ ನಿರೀಕ್ಷಿತ ಫಲ ನೀಡಿಲ್ಲ. ಕೊರೋನಾ ಚೈನ್ ಲಿಂಕ್ ತುಂಡರಿಸಬೇಕಾದರೇ ಲಾಕ್ಡೌನ್ ಅನಿವಾರ್ಯ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಕ್ಲೋಸ್ ಡೌನ್ ನಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿಲ್ಲ. ಎಲ್ಲರ ಅಭಿಪ್ರಾಯ ಲಾಕ್ಡೌನ್ ತರಬೇಕೆಂದು ಹೇಳುತ್ತಿದ್ದಾರೆ. ಇಂದು ಸಂಜೆ ಸಿಎಂ ಸಭೆ ಕರೆಯುತ್ತಿದ್ದಾರೆ. ಇನ್ನು ಒಂದೆರೆಡು ದಿನಗಳಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು. ಕಂಪ್ಲೀಟ್ ಲಾಕ್ಡೌನ್ ಪರಿಹಾರವಾದರೂ ಆದರಿಂದ ಆಗುವ ಸಾಧಕ ಬಾಧಕಗಳನ್ನು ಚರ್ಚಿಸಬೇಕಿದೆ, ದುಡಿಮೆ ನಂಬಿರುವವರ ಬಗ್ಗೆಯೂ ಯೋಚಿಸಬೇಕಿದೆ. ಬೇರೆ ಜಿಲ್ಲೆಗಳಲ್ಲಿ ಈಗ ಲಾಕ್ಡೌನ್ ಮಾಡಲಾಗುತ್ತಿದೆ ಎಂದು ವಿವರಿಸಿದರು.

ನಮ್ಮ ಜಿಲ್ಲೆಯ ಸ್ಥಿತಿ, ಅಂಕಿ-ಸಂಖ್ಯೆಗಳನ್ನು ಸಿಎಂ ಅವರಿಗೆ ತಿಳಿಸುತ್ತೇನೆ., ಕಳೆದ 24 ಗಂಟೆಗಳಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 6 ಮಂದಿ ಕೊರೋನಾ ಸೋಂಕಿತರು ಇಬ್ಬರು ಕೊರೋನಾ ಲಕ್ಷಣಗಳಿರುವ ವ್ಯಕ್ತಿಗಳು ನಿಧನ ಹೊಂದಿದ್ದಾರೆ, ವೆಂಟಿಲೇಟರಿನಲ್ಲಿರುವ 26 ಮಂದಿ ವರದಿ ನೋಡಿದೆ. ವೆಂಟಿಲೇಟರ್ ನಲ್ಲಿದ್ದರೂ ಕೆಲವರ ಉಸಿರಾಟ 60, 70, 80 ಇದೆ ಎಂದರು.

ಚಿಹ್ನೆ ಬಂದ ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿ, ಕೊರೋನಾ ಬಂದಾಗ ಆತಂಕ ಪಡದೇ ಆತ್ಮಸ್ಥೈರ್ಯ ಇರಲಿ ಎಂದು ಜಿಲ್ಲೆಯ ಜನರಿಗೆ ಮನವಿ ಮಾಡಿಕೊಂಡ ಜಿಲ್ಲಾ ಉಸ್ತುವಾರಿ ಸಚಿವ,ನಮ್ಮಲ್ಲಿ ಈಗ 200 ಜಂಬೋ ಸಿಲಿಂಡರ್, 700 ಲೀ. ಲಿಕ್ವಿಡ್ ಆ್ಯಕ್ಸಿಜನ್ ಇದೆ, 100 ಸಿಲಿಂಡರ್ ಮಧ್ಯಾಹ್ನದವರೆಗೆ ಬರಲಿದೆ ಎಂದು ಮಾಹಿತಿ ನೀಡಿದರು.

ಕೆಲ ಎಂಜಿನಿಯರ್ ತಂಡ ಬರಲಿದ್ದು ಆಮ್ಲಜನಕ ಪ್ಲಾಂಟ್ ಕೂಡ ಚೆಕ್ ಮಾಡಲಿದ್ದಾರೆ ಎಂದ ಸಚಿವರು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭರವಸೆ ಕೊಟ್ಟಂತೆ 7 ಸಾವಿರ ಲೀ. ಲಿಕ್ವಿಡ್ ಆಕ್ಸಿಜನ್ ನಮಗೆ ಕೊಡಬೇಕೆಂದು ನೋಡಲ್ ಅಧಿಕಾರಿಗೆ ಸೂಚಿಸಿರುವುದಾಗಿ ಮಾಹಿತಿ ನೀಡಿದ್ರು.

VIAಲಾಕ್ ಡೌನ್ ಮಾಡದೇ ಇದ್ದರೇ ಕೊರೋನಾ ಚೈನ್ ಲಿಂಕ್ ತುಂಡರಿಸುವುದು ಕಷ್ಟ; ಸಚಿವ ಎಸ್.ಸುರೇಶ್ ಕುಮಾರ್
SOURCEಲಾಕ್ ಡೌನ್ ಮಾಡದೇ ಇದ್ದರೇ ಕೊರೋನಾ ಚೈನ್ ಲಿಂಕ್ ತುಂಡರಿಸುವುದು ಕಷ್ಟ; ಸಚಿವ ಎಸ್.ಸುರೇಶ್ ಕುಮಾರ್
Previous articleಕೊವಿಡ್ ಆಸ್ಪತ್ರೆ ಆರಂಭಕ್ಕೆ ಕ್ಷಣಗಣನೆ: ಸಚಿವ ಬಿ. ಶ್ರೀರಾಮುಲು
Next articleಕೋವಿಡ್ ನಿಂದ ಮೃತಪಟ್ಟ ‌ಶವದ ಮುಂದೆ ತಾಳಿ, ಕಾಲುಂಗರ ಬಿಚ್ಚಿಟ್ಟ ಮಹಿಳೆ

LEAVE A REPLY

Please enter your comment!
Please enter your name here