ಟಿ20 ಟೀಂ ಇಂಡಿಯಾಕ್ಕೆ ಆಘಾತ: ಆಸ್ಟ್ರೇಲಿಯಾಕ್ಕೆ ಜಯ

ಕ್ರೀಡೆ

ಪಂಜಾಬ್ – ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಮ್ಯಾಚ್ ನಲ್ಲಿ ಭಾರತ ಪರಾಭವಗೊಂಡಿದೆ. ಗೆಲ್ಲಲು ಕಾಂಗೂರು ಪಡೆಗೆ 209 ರನ್ ಗಳ ಸವಾಲು ನೀಡಿದ್ದ ಟೀಂ ಇಂಡಿಯಾಕ್ಕೆ ನಿರಾಸೆಯಾಗಿದೆ. ಆಸ್ಟ್ರೇಲಿಯಾ ತಂಡ ಭಾರತ ನೀಡಿದ ಸವಾಲನ್ನ 19.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿದೆ . ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಅಂತರದಲ್ಲಿ ಮೇಲುಗೈ ಸಾಧಿಸಿದೆ..

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ ಕೆ.ಎಲ್ ರಾಹುಲ್ ಅವರ ಉಪಯುಕ್ತ 55 ರನ್ ಹಾಗೂ ಹಾರ್ಧಿಕ್ ಪಾಂಡ್ಯ ಔಟಾಗದೆ 71 ರನ್ ನೆರವಿನಿಂದ ಭಾರತ ಪ್ರವಾಸಿ ತಂಡಕ್ಕೆ ಬೃಹತ್ ಮೊತ್ತದ ಸವಾಲನ್ನ ನೀಡಿತ್ತು. ಸಾವಲನ್ನ ಬೆನ್ನಟ್ಟಿದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಆರನ್ ಪಿಂಚ್ 13 ಎಸೆತೆಗಳಲ್ಲಿ 22 ರನ್ ಬಾರಿಸಿದ್ರೆ,

ಕ್ಯಾಮರೂನ್ 30 ಎಸೆಗಳಲ್ಲಿ 61ರನ್ ಸಿಡಿಸಿದ್ರು, ಸ್ಟೀವನ್ ಸ್ಮಿತ್ 35 ರನ್ ಪೇರಿಸಿ ಆಸ್ಟ್ರೇಲಿಯಾಕ್ಕೆ ಭದ್ರ ಬುನಾದಿ ಹಾಕಿಕೊಟ್ರು. ಅಂತಿಮವಾಗಿ 4 ಎಸೆತಗಳು ಬಾಕಿ ಇರುವಾಗಲೇ ಕಾಂಗೂರು ಪಡೆ ಗೆಲುವಿ ನಗೆ ಬೀರಿತು. ಇನ್ನು ಬೌಲಿಂಗ್ ನಲ್ಲಿ ಆಸ್ಟ್ರೇಲಿಯಾ ಪರ ನಾಥನ್ ಇಲ್ಲಿಸ್ 3, ಹೆಜೆಲ್ವುಡ್ 2 ಕ್ಯಾಮರೂನ್ ಗ್ರೀನ್ 1 ವಿಕೆಟ್ ಕಬಳಿಸಿದ್ರು. ಟೀಂಇಂಡಿಯಾ ಪರ ಅಕ್ಸರ್ ಪಟೇಲ್ 3, ಉಮೇಶ್ ಯಾದವ್ 2, ಯಜುವೇಂದ್ರ ಚಹಲ್ 1 ವಿಕೆಟ್ ಪಡೆದ್ರು.