ಶಿಕ್ಷಕರ ನೇಮಕಾತಿ ಹಗರಣ: ಸಚಿವ ಪಾರ್ಥ ಚಟರ್ಜಿಯನ್ನು ವಜಗೊಳಿಸಿದ ಮಮತಾ ಬ್ಯಾನರ್ಜಿ

ರಾಷ್ಟ್ರೀಯ

ಕೋಲ್ಕತ್ತಾ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿ ನೇಮಕಾತಿಯಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಿದ್ದ ಪಾರ್ಥ ಚಟರ್ಜಿ ಅವರನ್ನು ಇಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ. ಪಾರ್ಥ ಚಟರ್ಜಿಯನ್ನು ಪಕ್ಷ ಮತ್ತು ಸಚಿವ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಟಿಎಂಸಿಯಲ್ಲೇ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿತ್ತು.

ಕಾಮರ್ಸ್ ಮತ್ತು ಇಂಡಸ್ಟ್ರಿ, ಸಂಸದೀಯ ವ್ಯವಹಾರ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್, ಪಬ್ಲಿಕ್ ಎಂಟರ್ ಪ್ರೈಸಸ್ ಆಂಡ್ ಇಂಡಸ್ಟ್ರಿಯಲ್ ರೀಕನ್ ಸ್ಟ್ರಕ್ಷನ್ ಖಾತೆಗಳನ್ನು ಚಟರ್ಜಿ ಹೊಂದಿದ್ದರು. ಅಷ್ಟೇ ಅಲ್ಲದೇ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಒಡೆತನದ ಎರಡನೇ ಫ್ಲ್ಯಾಟ್‍ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗಳಲ್ಲಿ ಅಧಿಕ ಚಿನ್ನಾಭರಣ ಹಾಗೂ 25 ಕೋಟಿ ರೂ.ನಷ್ಟು ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಪಾರ್ಥ ಚಟರ್ಜಿಯನ್ನು ವಜಾ ಮಾಡಲಾಗಿದೆ.

 ಇಡಿ ತನಿಖೆಗೆ ಒಳಪಟ್ಟ ಬಳಿಕ ಅರ್ಪಿತಾ ಮುಖರ್ಜಿ ಈ ಹಣ ಚಟರ್ಜಿ ಅವರಿಗೆ ಸೇರಿದ್ದಾಗಿ ತಿಳಿಸಿದ್ದು, ಈ ಹಣವನ್ನು ತನಗೆ ಸಂಬಂಧಿಸಿದ ಕಂಪನಿಯಲ್ಲಿ ತುಂಬಿಸಬೇಕಾಗಿತ್ತು ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದರು. ಅರ್ಪಿತಾ ವಿಚಾರಣೆಯ ಸಂದರ್ಭ ಇಡಿ ರೇಡ್‍ಗೂ ಮುನ್ನ 1-2 ದಿನಗಳಲ್ಲಿ ತನ್ನ ಮನೆಯಲ್ಲಿದ್ದ ಹಣದ ರಾಶಿಯನ್ನು ಸ್ಥಳಾಂತರಿಸುವ ಯೋಜನೆ ಮಾಡಿದ್ದಾಗಿ ಬಹಿರಂಗಪಡಿಸಿದ್ದರು.

Leave a Reply

Your email address will not be published.