ಟೀಂ 20 ವಿಶ್ವಕಪ್‌ ನಲ್ಲಿ ಬದ್ಧ ಎದುರಾಳಿ ವಿರುದ್ಧ ಬ್ಲೂ ಬಾಯ್ಸ್ ಬೆಸ್ಟ್‌

ಕ್ರೀಡೆ

ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿ ಅಕ್ಟೋಬರ್ 16 ಆರಂಭವಾಗಲಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಕ್ಟೋಬರ್ 23 ರಂದು ಸೆಣಸಲಿವೆ. ಟಿ20 ವಿಶ್ವಕಪ್‌ನಲ್ಲಿ ಭಾರತ, ಪಾಕಿಸ್ತಾನ ಒಂದೇ ಗುಂಪಿನಲ್ಲಿವೆ. ದಾಖಲೆ ಹಾಗೂ ಸಾಧನೆಗಳನ್ನ ಒರೆಗೆ ಹಚ್ಚಿದ್ರೆ ಟೀಂ ಇಂಡಿಯಾ ಬೆಸ್ಟ್‌ ಟೀಂ ಎನ್ನಲಾಗಿದೆ. ಕಳೆದ ಬಾರಿ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನವು ಮೊದಲ ಬಾರಿಗೆ ಭಾರತವನ್ನು ಸೋಲಿಸಿತು ಮತ್ತು ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಮೊದಲು ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು.

ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳಲಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನ ದಾಖಲೆ ಉತ್ತಮವಾಗಿದೆ. ದಾಖಲೆ ನೋಡಿದ್ರೆ ಭಾರತ ಪಾಕ್‌ ವಿರುದ್ಧ 5ರಲ್ಲಿ ಗೆಲವು ಸಾಧಿಸಿದ್ರೆ ಪಾಕಿಸ್ತಾನ 1 ಪಂದ್ಯದಲ್ಲಿ ಮಾತ್ರ ಗೆಲುವುಕಂಡಿದೆ. ಭಾರತ , ಪಾಕಿಸ್ತಾನ ತಂಡಗಳು ಒಂದೇ ಗುಂಪಿನ ಇರುವುದರಿಂದ ಮತ್ತೊಮ್ಮೆ ಉಭಯ ದೇಶಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಕಳೆದ ಬಾರಿ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪಾಕಿಸ್ತಾನ 10 ವಿಕೆಟ್‌ಗಳಿಂದ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ 10 ವಿಕೆಟ್‌ಗಳು ಬಾಕಿ ಇರುವಂತೆಯೇ ಗುರಿ ಮುಟ್ಟಿ ಭಾರತಕ್ಕೆ ಸೋಲು ಉಣಿಸಿತ್ತು.

ಪಂದ್ಯಾವಳಿಯಲ್ಲಿ ಬ್ಲೂ ಬಾಯ್ಸ್‌ 5 ಪಂದ್ಯಗಳನ್ನ ಆಡಲಿದ್ದಾರೆ

ಇಡೀ ಟೂರ್ನಿಯಲ್ಲಿ ಭಾರತ ಒಟ್ಟು ಐದು ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಭಾರತ ಮೊದಲ ಪಂದ್ಯ, ಅಕ್ಟೋಬರ್ 27 ರಂದು ಎ ಗುಂಪಿನ ರನ್ನರ್ ಅಪ್‌ ಜೊತೆಗಿನ ಪಂದ್ಯ, ಅಕ್ಟೋಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ, ನವೆಂಬರ್ 2 ರಂದು ಬಾಂಗ್ಲಾದೇಶದೊಂದಿಗೆ ಸೆಣಸಾಟ, ನವೆಂಬರ್ 6 ರಂದು ಬಿ ಗುಂಪಿನೊಂದಿಗೆ ಐದನೇ ಪಂದ್ಯ ಆಡಲಿದೆ. ಟಿ20 ವಿಶ್ವಕಪ್ ಪಂದ್ಯಗಳು ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿಯಲ್ಲಿನಡೆಯಲಿವೆ. ನವೆಂಬರ್ 13 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ.

ಸೆಮಿಫೈನಲ್ ಪಂದ್ಯಗಳು ನವೆಂಬರ್ 9 ಮತ್ತು 10 ರಂದು ಸಿಡ್ನಿ ಅಡಿಲೇಡ್ ನಲ್ಲಿ ನಡೆಯಲಿವೆ. ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು 45 ಪಂದ್ಯಗಳಲ್ಲಿ ಭಾಗಿಯಾಗಲಿವೆ. ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೂಪರ್ 12 ರ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು 1 ಪ್ರಸ್ತುತ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನದ ತಂಡಗಳನ್ನು ಒಳಗೊಂಡಿದೆ. ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಗುಂಪು 2 ರಲ್ಲಿವೆ.

ಭಾರತದ ಸೆಣಸುವ ಪಂದ್ಯಗಳು ಇಂತಿವೆ

ಮೊದಲ ಪಂದ್ಯ ಭಾರತ vs ಪಾಕಿಸ್ತಾನ – 23 ಅಕ್ಟೋಬರ್ (ಮೆಲ್ಬೋರ್ನ್)
ಎರಡನೇ ಪಂದ್ಯ ಭಾರತ vs ಗುಂಪು A ರನ್ನರ್ ಅಪ್ – 27 ಅಕ್ಟೋಬರ್ (ಸಿಡ್ನಿ)
ಮೂರನೇ ಪಂದ್ಯ ಭಾರತ vs ದಕ್ಷಿಣ ಆಫ್ರಿಕಾ – – 30 ಅಕ್ಟೋಬರ್ (ಪರ್ತ್)
ನಾಲ್ಕನೇ ಪಂದ್ಯ ಭಾರತ vs ಬಾಂಗ್ಲಾದೇಶ – ನವೆಂಬರ್ 2 (ಅಡಿಲೇಡ್)
ಐದನೇ ಪಂದ್ಯ ಭಾರತ vs ಗುಂಪು ಬಿ ವಿಜೇತ ಪಂದ್ಯದ ಜೊತೆ ಸೆಣಸು 6 ನವೆಂಬರ್ (ಮೆಲ್ಬೋರ್ನ್)

ಟಿ20 ವಿಶ್ವಕಪ್‌ ಟೀಂ ಇಂಡಿಯಾದ ವಿವರ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಬಿ. ಕುಮಾರ್ ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು- ರವಿ ಬಿಷ್ಣೋಯ್, ದೀಪಕ್ ಚಹಾರ್, ಮೊಹಮ್ಮದ್ ಶಮಿ,ಶ್ರೇಯಸ್ ಅಯ್ಯರ್,

ಪಾಕಿಸ್ತಾನ ತಂಡ

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ವಿಸಿ), ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಯುಎಸ್ ಮಸೂದ್ ಖಾದಿರ್.