ಮಾರಣಾಂತಿಕ ಹಲ್ಲೆ ಮಾಡಿ ಪೊಲೀಸರಿಗೆ ಶರಣಾದ ಭೂಪ..!

ಜಿಲ್ಲೆ

ತುಮಕೂರು: ಹಳೇ ವೈಷಮ್ಯದ ಹಿನ್ನೆಲೆ ಮಾರಣಾಂತಿಕ ಹಲ್ಲೆ‌ ಮಾಡಿ  ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾದ ಘಟನೆ ಭೀಮಸಂದ್ರ ದ ಜನನಿಬಿಡ ರಸ್ತೆಯಲ್ಲಿ ನಡೆದಿದೆ. ರಂಗರಾಜು ಎಂಬಾತನ ಮೇಲೆ ಕಿರಣ್ ಹಲ್ಲೆ ಮಾಡಿದ್ದು, ಹಳೇ ವೈಷಮ್ಯ ಇಟ್ಟುಕೊಂಡು ಜನನಿಬಿಡ ರಸ್ತೆಯಲ್ಲಿ ಈ ಕೃತ್ಯ ನಡೆದಿದೆ. ಇನ್ನೂ ಗಾಯಾಳುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಣಾಂತಿಕವಾಗಿ ಹಲ್ಲೆ ಮಾಡಿ ಸ್ಥಳದಿಂದ ಕಿರಣ್ ಪರಾರಿಯಾಗಿದ್ದನು. ನಂತರ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಆರೋಪಿ ಸರಂಡರ್ ಆಗಿದ್ದಾನೆ. ಇನ್ನೂ ಈ ಘಟನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.