ಶಾಸಕರ ಸಂಖ್ಯಾ ಬಲ ಯಾವ ಕ್ಷಣದಲ್ಲಿ ಬೇಕಾದರು ಬದಲಾಗಬಹುದು: ಸಂಜಯ್ ರಾವತ್

ರಾಷ್ಟ್ರೀಯ

ಮುಂಬೈ: ಮಹಾರಾಷ್ಟ್ರ ಸರ್ಕಾರ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದು  ವಿಧಾನಸಭೆಯಲ್ಲಿ ತಮ್ಮ ಬಲ ಕ್ಷೀಣಿಸುತ್ತಿದೆ ಎಂಬುದನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಒಪ್ಪಿಕೊಂಡಿದ್ದಾರೆ. ಶಿವಸೇನೆಯ ಸಚಿವ ಏಕನಾಥ್ ಶಿಂಧೆ ಬಂಡಾಯದ ಹಿನ್ನೆಲೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರ ಅಲ್ಲೋಲಕಲ್ಲೋಲವಾಗಿದೆ. ಆದರೆ ಸದನದಲ್ಲಿ ತಾವು ಬಹುಮತ ಸಾಬೀತುಪಡಿಸಲಿದ್ದು ಶಾಸಕರ ಸಂಖ್ಯಾಬಲ ಯಾವುದೇ ಕ್ಷಣದಲ್ಲಿ ಬೇಕಾದರು ಬದಲಾಗಬಹುದು ಎಂದು ಸಂಜಯ್ ರಾವತ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿದಾಗ ಪಕ್ಷದ ಮೇಲಿನ ನಿಷ್ಠೆಯ ನಿಜವಾದ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ರಾವತ್ ಬಿಜೆಪಿ ನಾಯಕ ನಾರಾಯಣ ರಾಣೆ ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.ಬಂಡಾಯ ನಾಯಕ ಏಕನಾಥ್ ಶಿಂಧೆ ಅವರ ಜೊತೆ ಪ್ರಸ್ತುತ ಶಿವಸೇನೆಯ 37 ಬಂಡಾಯ ಶಾಸಕರು ಮತ್ತು ಒಂಬತ್ತು ಸ್ವತಂತ್ರ ಶಾಸಕರು ಗುವಾಹಟಿಯ ಹೊಟೇಲ್ ನಲ್ಲಿ ಬೀಡುಬಿಟ್ಟಿದ್ದಾರೆ.

Leave a Reply

Your email address will not be published.