ಸೆಕೆಂಡುಗಳಲ್ಲಿ ಹತ್ತಾರು ಬೈಕ್ ಬ್ಯಾಟರಿಗಳ ಕಳ್ಳತನ: ಕಳ್ಳರ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆ

ಬೆಂಗಳೂರು

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಬಿಟಿಎಂ ಲೇಔಟ್ ನಲ್ಲಿ ಬೈಕ್ ವಾಹನಗಳ ಬ್ಯಾಟರಿ ಕಳ್ಳರ ಹಾವಳಿ ವಿಪರೀತವಾಗಿದೆ. ಒಂದೇ ದಿನ ಸುಮಾರು 20ಕ್ಕೂ ಹೆಚ್ಚು ಬೈಕ್ ಗಳ ಬ್ಯಾಟರಿಗಳು ಕಳ್ಳತನವಾಗಿವೆ. ಒಬ್ಬನೇ ಏಕಾಂಗಿಯಾಗಿ ಬಂದು ಆಕ್ಟಿವಾ ವೆಹಿಕಲ್ ನಲ್ಲಿ ಬಂದು ಬೈಕ್ ಬ್ಯಾಟರಿಗಳನ್ನು ಕಳ್ಳತನ ಮಾಡುವುದು ಗೋಚರಿಸಿದೆ. ಅದರಲ್ಲೂ ಬುಲೆಟ್ ಮತ್ತು ಪಲ್ಸರ್ ಬೈಕ್ ಬ್ಯಾಟರಿಗಳೇ ಇವನ ಟಾರ್ಗೆಟ್. ಐದರಿಂದ ಹತ್ತು ಸೆಕೆಂಡ್ ಗಳಲ್ಲಿ ಬೈಕ್ ಬ್ಯಾಟರಿಗಳನ್ನು ಎಸ್ಕೇಪ್ ಮಾಡುವ ಖದೀಮತನ ಇವನದ್ದಾಗಿದೆ. ಖದೀಮ ಬೈಕ್ ನ ಬ್ಯಾಟರಿಗಳನ್ನು ಕದ್ದು ಗೋಣಿಚೀಲ ದಲ್ಲಿ ಇಟ್ಟುಕೊಂಡು ಎಸ್ಕೇಪ್ ಆಗುವುದು ಪತ್ತೆಯಾಗಿದೆ. ಒಂದೇ ದಿನ ಇಷ್ಟೊಂದು ಭಾರೀ ಪ್ರಮಾಣದಲ್ಲಿ ಕಳ್ಳತನ ಆಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೈಕ್ ವಾಹನಗಳ ಬ್ಯಾಟರಿ ಕಳ್ಳತನ ಮಾಡ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published.