Home District ಮೂರು ಕ್ಷೇತ್ರದಲ್ಲಿ ಗೆಲುವು ನಮ್ಮದೆ; ಡಿಸಿಎಮ್ ಸವದಿ

ಮೂರು ಕ್ಷೇತ್ರದಲ್ಲಿ ಗೆಲುವು ನಮ್ಮದೆ; ಡಿಸಿಎಮ್ ಸವದಿ

ಬೆಳಗಾವಿ ಲೋಕಸಭಾ ಚುನಾವಣೆಯ ಬಗ್ಗೆ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಮ್ ಲಕ್ಷ್ಮಣ ಸವದಿ ಬಿಜೆಪಿ ಪಕ್ಷದ ವಿರುದ್ದ ಯಾರೇ ಸ್ಪರ್ದಿಸಿದರೂ ಅವರ ಸೋಲು ಖಚಿತ.ಅಷ್ಟರ ಮಟ್ಟಿಗೆ ಪಕ್ಷ ಈಗ ಬೆಳೆದು ನಿಂತಿದೆ ರಾಹುಲ್ ಗಾಂದಿ ಎರಡು ಕ್ಷೇತ್ರಕ್ಕೆ ಸ್ಪರ್ದೆ ಮಾಡಿದ್ದರು ಏನಾಯಿತು? ಸೋನಿಯಾ ಮತ್ತು ರಾಹುಲ್ ಗಾಂಧಿಯವರನ್ನು ಬಿಜೆಪಿ ಸೋಲಿಸಿದೆ ಇನ್ನು ಬೆಳಗಾವಿಯಲ್ಲಿ ಯಾರು ಸ್ಪರ್ದಿಸಿದರೆ ಏನು ಗೆಲುವಿ ನಮ್ಮದೆ ಎಂದಿದ್ದಾರೆ. ಪಕ್ಷದ ಮುಖಂಡರು ಮತ್ತು ನಿಷ್ಠಾವಂತ ಕಾರ್ಯಕರ್ತರು ಜನರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ಅವಿರತ ಶ್ರಮ ಹಾಕುತ್ತಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ.ರಾಜ್ಯ ಮತ್ತು ದೇಶದ ಅಭಿವೃದ್ಧಿ ಯನ್ನು ಜನರು ಗಮನಿಸಿದ್ದಾರೆ ಆದ್ದರಿಂದ ಬಸವಕಲ್ಯಾಣ , ಮಸ್ಕಿ ,ಮತ್ತು ಬೆಳಗಾವಿ ಯಲ್ಲಿ ಬಿಜೆಪಿ ಅಭ್ಯರ್ಥಿಗಳು ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದರಲ್ಲದೆ ಕೇಂದ್ರ ಸಚೀವರಾಗಿದ್ದ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ನಡೆಯುತ್ತಿರುವ ಉಪಚುನಾವಣೆಯಲ್ಲಿ ಅವರ ಧರ್ಮಪತ್ನಿ ಮಂಗಲಾ ಅಂಗಡಿ ಅವರನ್ನು ಬಹುಮತಗಳಿಂದ ಜನರು ಗೆಲ್ಲಿಸಲಿದ್ದಾರೆ ಎಂದರು. ಇದೇ ವೇಳೆ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಸರ್ಕಾರ ಈಗಾಗಲೇ ಸಾರಿಗೆ ಇಲಾಖೆ ನೌಕರರೊಂದಿಗೆ ಐದು ಬಾರಿ ಸಭೆ ನಡೆಸಿದ್ದು ಅವರು ಬೇಡಿಕೆ ಇಟ್ಟಿದ್ದ ಒಂಭತ್ತು ಬೇಡಿಕೆಗಳ ಪೈಕಿ ಎಂಟು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಮವಾರ ಮತ್ತೆ ಮುಖ್ಯಮಂತ್ರಿ ಬಿಎಸ್ ಯಡ್ಯೂರಪ್ಪನವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು ಸಾರಿಗೆ ನೌಕರರು ಕೊರೊನಾದಂತ ಸಂಕಷ್ಟದ ಸಮಯದಲ್ಲಿಯೂ ಕರ್ತವ್ಯ ನೀರ್ವಹಿಸಿದ್ದನ್ನು ನಾವು ಮರೆತಿಲ್ಲ ಕೊನೆಯದಾಗಿ ಉಳಿದ. ಬೇಡಿಕೆಯನ್ನು ಈಡೇರಿಸುವ ದೃಷ್ಟಿಯನ್ನು ಇಟ್ಟುಕೊಂಡು ಚರ್ಚೆ ನಡೆಯಲಿದೆ ಆದ್ದರಿಂದ ಯಾವುದೇ ರೀತಿಯ ಪ್ರತಿಭಟನೆ ನಡೆಸದೆ ಮುಷ್ಕರ ಹಿಂದಕ್ಕೆ ಪಡೆಯಬೇಕು ಒಂದು ವೇಳೆ ಪ್ರತಿಭಟನೆ ನಡೆಸಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡುವದಾಗಿ ಹೇಳಿದರು.

404
0
VIAಮೂರು ಕ್ಷೇತ್ರದಲ್ಲಿ ಗೆಲುವು ನಮ್ಮದೆ ಡಿಸಿಎಮ್ ಸವದಿ
Previous articleಆಚಾರ್ಯವಾಣಿ: ಉದ್ಯೋಗ,ಆರೋಗ್ಯ,ಹಣಕಾಸಿನ ತೊಂದರೆಗಳಿಗೆ ಶೀಘ್ರ ಪರಿಹಾರ
Next articleಬೆಂಕಿ ಅವಘಡ: ಮನೆ ಸಂಪೂರ್ಣವಾಗಿ ಭಸ್ಮ

LEAVE A REPLY

Please enter your comment!
Please enter your name here