ಹೊಸ ಸಿಲಿಂಡರ್ ಸಂಪರ್ಕಕ್ಕೆ ಈ ನಂಬರ್ ಗೆ ಮಿಸ್ಡ್ ಕಾಲ್ ಮಾಡಿ

ತಂತ್ರಜ್ಞಾನ

ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರ ನೀಡಿರುವ ಈ ನಂಬರ್ ಗೆ ಮಿಸ್ಡ್ ಕಾಲ್ ನಿದ್ರೆ ಸಾಕು ಮನೆಗೆ ಸಂಪರ್ಕ ಪಡೆಯಯಬಹುದು. ಸರ್ಕಾರಿ ಕಂಪನಿಯಿಂದ ಸಿಲಿಂಡರ್‌ಗಳನ್ನು ಬುಕ್ ಮಾಡಲು ಗ್ರಾಹಕರಿಗೆ ಹಲವು ರೀತಿಯ ಆಯ್ಕೆಗಳನ್ನು ನೀಡಲಾಗಿದೆ, ಆದರೆ ಈಗ ನೀವು ಮಿಸ್ಡ್ ಕಾಲ್ ಮೂಲಕ ಮಾತ್ರ ಎಲ್‌ಪಿಜಿ ಸಿಲಿಂಡರ್ ಅನ್ನು ಬುಕ್ ಮಾಡಬಹು ದಾಗಿದೆ.

ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುವ ಸಾರ್ವಜನಿಕ ಪೆಟ್ರೋಲಿಯಂ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗ್ರಾಹಕರಿಗೆ ಮಿಸ್ಡ್ ಕಾಲ್ ಸಂಖ್ಯೆಯನ್ನು ನೀಡಿದೆ. ಜಸ್ಟ್‌ ಮಿಸ್‌ ಕಾಲ್‌ ನೀಡಿದ್ರೆ ಸಿಲಿಂಡರ್‌ಗಳನ್ನು ಮನೆ ಬಾಗಿಲಿಗೆ ತಲುಪಿಸುವುದಾಗಿ ಕಂಪನಿ ತಿಳಿಸಿದೆ. ಹೊಸ ನಂಬರ್‌ ನಿಂದಾಗಿ ಗ್ಯಾಸ್‌ ಏಜೆನ್ಸಿ ಬಳಿ ಹೋಗೋದು ತಪ್ಪುತ್ತೆ.

IOCL ತನ್ನ ಅಧಿಕೃತ ಟ್ವೀಟ್‌ನಲ್ಲಿ ಹೊಸ ಇಂಡೇನ್ LPG ಸಂಪರ್ಕವನ್ನು ಮಿಸ್ಡ್ ಕಾಲ್ ಮೂಲಕ ಮಾತ್ರ ಪಡೆಯಬಹುದು ಎಂದು ಬರೆದುಕೊಂಡಿದೆ. 8454955555 ಸಂಖ್ಯೆಗೆ ಡಯಲ್ ಮಾಡಿ ಮತ್ತು LPG ಸಂಪರ್ಕವು ನಿಮ್ಮ ಮನೆ ಬಾಗಿಲಿಗೆ ತರಸಿಕೊಳ್ಳಬಹುದಾಗಿದೆ.

ಯಾವ ರೀತಿ ಈ ಕಾರ್ಯ ನಡೆಯುತ್ತೆ ಅಂದ್ರೆ

  • ಈ ಸಂಖ್ಯೆ 8454955555 ಗೆ ಮಿಸ್ಡ್ ಕಾಲ್ ನೀಡಿದ ನಂತರ, ನಿಮಗೆ ಇಂಡೇನ್‌ನಿಂದ SMS ಬರುತ್ತದೆ.
  • ಈಗ ನೀವು ಅದರಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
  • ಇದರ ನಂತರ ನಿಮ್ಮ ವಿವರಗಳನ್ನು ಕೇಳಲಾಗುತ್ತದೆ.
  • ಈ ವಿವರವನ್ನು ಭರ್ತಿ ಮಾಡಿದ ನಂತರ, ನೀವು ಅದನ್ನು ಸಲ್ಲಿಸಬೇಕಾಗುತ್ತದೆ.
  • ಇದರ ನಂತರ ವಿತರಕರು ನಿಮ್ಮನ್ನು ಸಂಪರ್ಕಿಸುತ್ತಾರೆ.
  • ನಿಮ್ಮ ಸಂಪೂರ್ಣ ಪ್ರಕ್ರಿಯೆಯ ನಂತರ LPG ಅನ್ನು ವಿತರಿಸಲಾಗುತ್ತದೆ.
  • ತನ್ನ ಸಿಲಿಂಡರ್ ಅನ್ನು ಮರುಪೂರಣಗೊಳಿಸಬಹುದು. ಗ್ರಾಹಕರು ತಮ್ಮ ನೋಂದಾಯಿತ ಫೋನ್ ಸಂಖ್ಯೆಯಿಂದ ಕರೆ ಮಾಡಬೇಕಾಗುತ್ತದೆ.