Home District ರಸ್ತೆಗಿಳಿದ ವಾಹನಗಳು ಸೀಜ್; ವಾಹನ ಸವಾರರ ಅಳಲು!

ರಸ್ತೆಗಿಳಿದ ವಾಹನಗಳು ಸೀಜ್; ವಾಹನ ಸವಾರರ ಅಳಲು!

ರಸ್ತೆಗಿಳಿದ ವಾಹನಗಳು ಸೀಜ್; ವಾಹನ ಸವಾರರ ಅಳಲು!

349
0

ರಾಯಚೂರು ಬ್ರೇಕಿಂಗ್: ಜಿಲ್ಲೆಯಾದ್ಯಂತ ನೂರಾರು ವಾಹನಗಳನ್ನು ಸೀಜ್ ಮಾಡಿದ ಪೊಲೀಸರು.ಕರೋನಾ ನಿಯಂತ್ರಿಸಲು ಜನರ ಸಹಕಾರ ಕೂಡ ಅಗತ್ಯ ವಿನಾಕಾರಣ ಜನ ಹೊರಗಡೆ ಬರಬಾರದೆಂದು ಜಿಲ್ಲಾ ಪೊಲೀಸ್ ಅಧಿಕಾರಿ ಪ್ರಕಾಶ ನಿಕ್ಕಂ ಹೇಳಿದರು.

ಇಂದಿನಿಂದ ಕರ್ನಾಟಕದಲ್ಲಿ ಲಾಕಡೌನ್ ಮಾಡಲಾಗುತ್ತಿದ್ದು, ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಹೊರಗಡೆ ತರದಂತೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿತ್ತು.ಆದರೂ ಕೂಡ ಜನ ವಿನಾಕಾರಣ ವಾಹನಗಳ ಮೇಲೆ ಓಡಾಡುತ್ತಿದ್ದಾರೆ. ಜನರಿಗೆ ಸೂಚನೆ ನೀಡಿದ್ದರೂ ವಾಹನ ಸವಾರಿ ಮಾಡುತ್ತಿರುವವರನ್ನು ಹಿಡಿದು ಅವರ ವಾಹನಗಳನ್ನು ಸೀಜ್ ಮಾಡಿ ದಂಡ ಹಾಕಲಾಗುತ್ತಿದೆ.

ಆದರೆ ದಂಡ ಹಾಕುವದಕ್ಕಿಂತಲೂ ಹೆಚ್ಚು ಜನರು ಈಗಿನ ಅವಶ್ಯಕತೆಯನ್ನ ಮನಗಂಡು ನಮ್ಮೊಂದಿಗೆ ಸಹಕರಿಸಿದರೆ ಮಾತ್ರ ಕರೋನಾ ನಿಯಂತ್ರಣ ಸಾದ್ಯ. ಹಾಗಾಗಿ ಜನರಲ್ಲಿ ವಿನಾಕಾರಣ ಹೊರಬರದಂತೆ ನಾನು ಮನವಿ ಮಾಡುತ್ತೇನೆ ಎಂದು ಎಸ್ ಪಿ ಪ್ರಕಾಶ ನಿಕ್ಕಂ ಹೇಳಿದರು.

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ವಾಹನಗಳ ಮೇಲೆ ಬಂದ ವಾಹನ ಸವಾರರಿಗೆ ರಾಯಚೂರು ಜಿಲ್ಲೆಯ ಪೊಲೀಸರು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು ನೂರಾರು ವಾಹನಗಳನ್ನು ಸೀಜ್ ಮಾಡಿದ್ದಾರೆ. ಹಟ್ಟಿ ಪಟ್ಟಣದ ಕೋಟಾ ಕ್ರಾಸ್ ಬಳಿ ಸೀಜ್ ಮಾಡಿದ ಎಲ್ಲಾ ಗಾಡಿಗಳನ್ನು ಸಾಲಾಗಿ ನಿಲ್ಲಿಸಲಾಗಿದ್ದು, ಕೆಲವು ವಾಹನ ಸವಾರರು ಪೊಲೀಸರ ಹತ್ತಿರ ವಾಹನ ಮರಳಿ ಪಡೆಯಲು ಪ್ರಯತ್ನಿಸುತ್ತಿರುವುದು ಕಂಡು ಬಂತು.

VIAರಸ್ತೆಗಿಳಿದ ವಾಹನಗಳು ಸೀಜ್; ವಾಹನ ಸವಾರರ ಅಳಲು!
SOURCEರಸ್ತೆಗಿಳಿದ ವಾಹನಗಳು ಸೀಜ್; ವಾಹನ ಸವಾರರ ಅಳಲು!
Previous articleಕೊರೊನಾಕ್ಕೆ ಹೆದರಿ ನೇಣಿಗೆ ಶರಣಾದ ವೃದ್ಧೆ
Next articleರಾಜ್ಯದಲ್ಲಿ ಒಂದೇ ದಿನ 39,305 ಕೋರೋನಾ ಕೇಸ್!

LEAVE A REPLY

Please enter your comment!
Please enter your name here