Home District ಯಡಿಯೂರಪ್ಪ ಒಬ್ಬ ಸರ್ವಾಧಿಕಾರಿ, ಈಶ್ವರಪ್ಪನವರ ವಾದ ಸರಿಯಾಗಿದೆ; ವಾಟಾಳ್ ನಾಗರಾಜ್ ಸ್ಪಷ್ಟನೆ

ಯಡಿಯೂರಪ್ಪ ಒಬ್ಬ ಸರ್ವಾಧಿಕಾರಿ, ಈಶ್ವರಪ್ಪನವರ ವಾದ ಸರಿಯಾಗಿದೆ; ವಾಟಾಳ್ ನಾಗರಾಜ್ ಸ್ಪಷ್ಟನೆ

426
0

ಚಿತ್ರದುರ್ಗದಲ್ಲಿ ಕನ್ನಡಪರ ಸಂಘಟನೆಗಳ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ. ನಮ್ಮ ರಾಜ್ಯ ಯಾವ ದಿಕ್ಕಿಗೆ ಹೋಗುತ್ತಿದೆ? ಇವತ್ತಿನ ರಾಜಕಾರಣ ಹೊಲಸಾಗಿದೆ, ಹದಗೆಟ್ಟಿದೆ, ಭ್ರಷ್ಡರ ಕೂಟವಾಗಿದೆ.ಪ್ರಾಮಾಣಿಕತೆ ಮಾಯವಾಗಿದೆ, ಯಡಿಯೂರಪ್ಪ ಸರ್ಕಾರ ಲಿಮಿಟೆಡ್ ಕಂಪನಿ. ಯಡಿಯೂರಪ್ಪ ಅರ್ವಾಧಿಕಾರಿ, ಯಾರ ಮಾತನ್ನೂ ಕೇಳುವುದಿಲ್ಲ.ಕರ್ನಾಟಕದಲ್ಲಿ ಪ್ರಾಮಾಣಿಕ ಆಡಲಕಿತವಿಲ್ಲ, ಎಲ್ಲಾ ಅಧಿಕಾರಿಗಳೂ ಬಿಎಸ್ ವೈ ಗುಲಾಮರಾಗಿದ್ದಾರೆ. ಸರ್ಕಾರವನ್ನು ಪ್ರಶ್ನೆ ಮಾಡಿದವರಿಗೆ ಉಳಿಗಾಲವಿಲ್ಲ.ಕಾನೂನು ಸಚಿವ ಮಾಧು ಸ್ವಾಮಿ ಖಾತೆಯನ್ನು ಕಿತ್ತುಕೊಂಡರು.ಮೂರ‌ನೇ ಸ್ಥಾನದ ಖಾತೆ ನೀಡಿ, ಕಡೆಗಣಿಸಿದ್ದಾರೆ.

ಈ ರಾಜ್ಯದಲ್ಲಿ ಅಗತ್ಯವಾಗಿ ಸಾರ್ವತ್ರಿಕ ಚುನಾವಣೆ ಆಗಬೇಕು.ಬಹಳ ಬೇಗ ಚುನಾವಣೆ ಬರಬೇಕು, ಪ್ರಾಮಾಣಿಕ ಸರ್ಕಾರ ಬರಬೇಕು.ಮೂರು ರಾಜಕೀಯ ಪಕ್ಷಗಳ ಮೇಲೆ ನಂಬಿಕೆಯಿಲ್ಲ. ಹೊಸದಾದ ಶಕ್ತಿಯೊಂದು ಉದಯಿಸುವ ಅಗತ್ಯ ಹೆಚ್ಚಾಗಿದೆ.ರಾಜ್ಯದ ಜನತೆಗೆ ಮನವಿ ಮಾಡುತ್ತೇನೆ, ಯಡಿಯೂರಪ್ಪನ ಕಂಪನಿ ಹೋಗಬೇಕು.ಇಲ್ಲದಿದ್ದರೆ ರಾಜ್ಯದ ಜನತೆಗೆ ಒಳಿತಾಗುವುದಿಲ್ಲ.ಮಠಾಧೀಶರುಗಳು ಯಡಿಯೂರಪ್ಪನಿಗೆ ಬೆಂಬಲ ಕೊಡುವುದನ್ನು ನಿಲ್ಲಿಸಬೇಕು.ಭಾಷೆಯ ಹೆಸರಿನಲ್ಲಿ ಹೊಸದೊಂದು ಶಕ್ತಿ ಉದಯವಾಗಬೇಕು.ಹೊಸ ಶಕ್ತಿಯ ಆಡಳಿತ ಆರಂಭವಾಗಬೇಕು.

ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣ.ನಾನು ಜಾರಕಿಹೋಳಿ ಬಂಧಿಸುವ ಬಗ್ಗೆ ಮಾತನಾಡುವುದಿಲ್ಲ.ಉನ್ನತ ಮಟ್ಟದ ಸಮಗ್ರವಾದ ತನಿಖೆ ಆಗಬೇಕು.ಈ ಪ್ರಕರಣ ದೇಶದ ಮೇಲೆ ಪ್ರಭಾವ ಬೀರಿದೆ.ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಸಿಎಂ ಹಸ್ತಕ್ಷೇಪ ವಿಚಾರ.ಯಡಿಯೂರಪ್ಪ ಸರ್ವಾಧಿಕಾರಿ, ಈಶ್ವರಪ್ಪನ ವಾದ ಸರಿಯಾಗಿದೆ.ಸಿಎಂ ಹಸ್ತಕ್ಷೇಪ ಸರಿಯಿಲ್ಲ, ಶಾಸಕರು ಅವರನ್ನು ಬೆಂಬಲುವುದು ಸರಿಯಿಲ್ಲ.ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪ ಸ್ಮಾರಕದ ಭೇಟಿ ಬಳಿಕ ಹೇಳಿಕೆ.

Previous articleಲೋಕಸಭೆ ಚುನಾವಣೆ 2021; ರಂಗೇರಿದ ಪ್ರಚಾರದ ಅಬ್ಬರ; ಮತಬೇಟೆಗೆ ಇಳಿದ ಸತೀಶ್ ಜಾರಕಿಹೊಳಿ
Next articleಟಾಕ್ ವಾರ್; ಹಿರಿಯ ವಕೀಲ ಜಗದೀಶ್ ಮತ್ತು ಪುನೀತ್ ಕೆರೆಹಳ್ಳಿ ನಡುವಿನ ಮಾತಿನ ಸಮರ; ಪ್ರಜಾ ಟಿವಿ ವಿಶೇಷ ವರದಿ

LEAVE A REPLY

Please enter your comment!
Please enter your name here