Home Home ಆರೋಗ್ಯ ಸಚಿವ ಡಾ ಕೆ ಸುಧಾಕರ್ ಉಸ್ತುವಾರಿ ಜಿಲ್ಲೆಯಲ್ಲೇ ವೆಂಟಿಲೇಟರ್ ಗಳ ದುರ್ಬಳಕೆ

ಆರೋಗ್ಯ ಸಚಿವ ಡಾ ಕೆ ಸುಧಾಕರ್ ಉಸ್ತುವಾರಿ ಜಿಲ್ಲೆಯಲ್ಲೇ ವೆಂಟಿಲೇಟರ್ ಗಳ ದುರ್ಬಳಕೆ

ಆರೋಗ್ಯ ಸಚಿವ ಡಾ ಕೆ ಸುಧಾಕರ್ ಉಸ್ತುವಾರಿ ಜಿಲ್ಲೆಯಲ್ಲೇ ವೆಂಟಿಲೇಟರ್ ಗಳ ದುರ್ಬಳಕೆ

284
0
SHARE

ವರದಿ: ಸುರೇಶ್ ಗುಡಿಬಂಡೆ

ಚಿಕ್ಕಬಳ್ಳಾಪುರ. ಉಪಯೋಗವಾಗದೆ ಮೂಲೆಗೆ ಸೇರಿದ ವೆಂಟಲೇಟರ್‌ಗಳು. ಆರೋಗ್ಯ ಸಚಿವ ಡಾ ಕೆ ಸುಧಾಕರ್ ಉಸ್ತುವಾರಿ ಜಿಲ್ಲೆಯಲ್ಲೇ ವೆಂಟಿಲೇಟರ್ ಗಳ ದುರ್ಬಳಕೆ.

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರೋದ್ರಿಂದ ರೋಗಿಗಳಿಗೆ ಅನುಕೂಲವಾಗಲಿ ಅಂತ ವೆಂಟಿಲೇಟರ್​ಗಳನ್ನು ವೆಂಟಿಲೇಟರ್ ಗಳನ್ನು ತರಿಸಿದ್ರು ಆದರೆ ವೆಂಟಿಲೇಟರ್ ಯಂತ್ರಗಳನ್ನು ಬಳಸಿಕೊಳ್ಳದೆ ಮೂಲೆಗೆ ತಳ್ಳಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಂಸಿಎಚ್ ಆಸ್ಪತ್ರೆಯಲ್ಲಿ ಕಂಡು ಬಂದಿದೆ. ಪಿಎಮ್ ಕೇರ್ ಫಂಡ್​ನಿಂದ ತಾಲ್ಲೂಕಿನಾದ್ಯಂತ ಎಲ್ಲಾ ಆಸ್ಪತ್ರೆಗಳಿಗೆ ವೆಂಟಿಲೇಟರ್‌ಗಳನ್ನು ನೀಡಲಾಗಿದೆ. ಆದ್ರೆ ಆಸ್ಪತ್ರೆಯ ಅಧಿಕಾರಿಗಳು ಮಾತ್ರ ಎಲ್ಲವನ್ನು ಮೂಲೆ ಗುಂಪು ಮಾಡಿದ್ದು, ಜನರ ಜೀವಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗೌರಿಬಿದನೂರು ತಾಲ್ಲೂಕಿನ MCH ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಬಳಕೆ ಇಲ್ಲದೆ ಮೂಲೆಗುಂಪಾಗಿ ಬಿದ್ದಿದ್ದು, ಆರೋಗ್ಯ ಸಚಿವ ಡಾ ಕೆ ಸುಧಾಕರ್ ಉಸ್ತುವಾರಿ ಜಿಲ್ಲೆಯಲ್ಲೇ ಸೋಂಕಿತರು ಚಿಕಿತ್ಸೆಯಿಂದ ವಂಚಿತರಾಗುವಂತಾಗಿದೆ. ಇದೆಲ್ಲವೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಗಮನಕ್ಕೆ ಬಂದ್ರೂ ಕ್ರಮ ಕೈಗೊಂಡಿಲ್ಲವಂತೆ, ಇಷ್ಟು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಜನರ ಪ್ರಶ್ನೆಯಾಗಿದೆ‌.

LEAVE A REPLY

Please enter your comment!
Please enter your name here