. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದ ಕಿಚ್ಚ ಸುದೀಪ್

ಚಲನಚಿತ್ರ

ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ವೀರೇಂದ್ರ ಹೆಗ್ಗಡೆ ಅವರನ್ನು ಕಿಚ್ಚ ಸುದೀಪ್​ ಅವರು ಭೇಟಿ ಆಗಿದ್ದಾರೆ. ಈ ಫೋಟೋಗಳು ವೈರಲ್​ ಆಗಿವೆ.‘ವಿಕ್ರಾಂತ್​ ರೋಣ’ ಸಿನಿಮಾ ಜುಲೈ 28ರಂದು ಅದ್ದೂರಿಯಾಗಿ ಬಿಡುಗಡೆ ಆಗಿದೆ. ಈ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಸುದೀಪ್​ ಅವರು ಆಶೀರ್ವಾದ ಪಡೆದಿದ್ದಾರೆ.ಸುದೀಪ್​ ಜೊತೆ ಪತ್ನಿ ಪ್ರಿಯಾ, ನಿರ್ಮಾಪಕ–ಸ್ನೇಹಿತ ಜಾಕ್​ ಮಂಜು ಕೂಡ ಈ ವೇಳೆ ಸಾಥ್​ ನೀಡಿದರು.

ವೀರೇಂದ್ರ ಹೆಗ್ಗಡೆಯವರ ಜೊತೆ ಎಲ್ಲರೂ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.ದೆಹಲಿಯಲ್ಲಿ ಸಂಸದರಿಗಾಗಿ ‘ವಿಕ್ರಾಂತ್​ ರೋಣ’ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಈ ಸಲುವಾಗಿ ಚಿತ್ರತಂಡದ ಜೊತೆ ಸುದೀಪ್​ ಅಲ್ಲಿಗೆ ತೆರಳಿದ್ದಾರೆ.3ಡಿಯಲ್ಲಿ ಮೂಡಿಬಂದಿರುವ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್​ ಆಗಿದೆ. ವೀಕೆಂಡ್​ನಲ್ಲೂ ಬಿಸ್ನೆಸ್​ ಹೆಚ್ಚುತ್ತಿದೆ.

Leave a Reply

Your email address will not be published.