ನಮ್ಮದು ಕಲೆಕ್ಟೀವ್ ಲೀಡರ್ ಶಿಪ್ ಒಟ್ಟಾಗಿ ಚುನಾವಣೆ ಎದುರಿಸ್ತೀವಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು

ಬೆಂಗಳೂರು: ದಾವಣಗೆರೆಯಲ್ಲಿ ನಡೆದ ಸಿದ್ಧರಾಮೋತ್ಸವದ ಸಮಾರಂಭ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮೋತ್ಸವದಿಂದ ನನಗ್ಯಾಕೆ ಶಾಕ್ ಆಗಬೇಕು? ಜನಸಾಗರವೇ ಕಾಂಗ್ರೆಸ್ ಪಕ್ಷದ ಶಕ್ತಿ, ಸಿದ್ದರಾಮೋತ್ಸವ ಸಿದ್ದರಾಮಯ್ಯ,

ಪಕ್ಷ ಎರಡಕ್ಕೂ ಶಕ್ತಿ ತುಂಬಿದೆ. ನಾನು ಕುರ್ಚಿ ಬಗ್ಗೆ ಯೋಚನೆ ಮಾಡ್ತಿಲ್ಲ. ಕಾರ್ಯಕರ್ತರು ವಿಧಾನಸೌಧ 3ನೇ ಮಹಡಿ ಮೇಲೆ ಓಡಾಡಬೇಕು. ಒಕ್ಕಲಿಗ ಸಮುದಾಯದ ಬಳಿ ಸಹಕಾರ ಕೇಳಿದ್ರೆ ತಪ್ಪೇನು? ನಮ್ಮದು ಕಲೆಕ್ಟೀವ್ ಲೀಡರ್‌ ಶಿಪ್ ಒಟ್ಟಾಗಿ ಚುನಾವಣೆ ಎದುರಿಸ್ತೀವಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Leave a Reply

Your email address will not be published.