ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ನಮಗೇನೂ ಭಯ ಇಲ್ಲ: ಶಾಸಕ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು

ಬೆಂಗಳೂರು: ನಾನು ಸಿದ್ದರಾಮಯ್ಯನವರ ಬಗ್ಗೆ ಟೀಕೆ ಮಾಡಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ವಿಧಾನಸೌಧದಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಮಾಡಿರುವುದು ಸಿದ್ದರಾಮಯ್ಯನವರ ಅಭಿಮಾನಿಗಳು. ಕಾಂಗ್ರೆಸ್‍ನವರು ಈಗ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಅಂದುಕೊಂಡಿದ್ದಾರೆ. ಅಲ್ಲಿ ಬಂದಿರುವ 60 ಪರ್ಸೆಂಟ್ ಜನ ಸಿದ್ದರಾಮಯ್ಯ ಅಭಿಮಾನಿಗಳು. ನಾನು ಸಿದ್ದರಾಮಯ್ಯನವರ ಬಗ್ಗೆ ಟೀಕೆ ಮಾಡಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಇಟ್ಟಿರುವ ಗೌರವಕ್ಕೆ ಅಭಿಮಾನಿಗಳು ಬಂದಿದ್ದಾರೆ.

ಆದರೆ ಅವರು ಕಾಂಗ್ರೆಸ್ ಓಟರ್ಸ್ ಅಲ್ಲ. ಕಾಂಗ್ರೆಸ್ ಒಂದು ರೀತಿ ಸತ್ತೇ ಹೋಗಿದೆ. ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್ ಬಲಿಷ್ಟವಾಗಿದೆ. ಬಸವರಾಜ್ ಬೊಮ್ಮಾಯಿ ಕೊಟ್ಟ ಅನೇಕ ಕಾರ್ಯಕ್ರಮಗಳು ಜನಪರವಾಗಿವೆ. ಕಾಂಗ್ರೆಸ್ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ನಮಗೇನೂ ಭಯ ಇಲ್ಲ. ಆ ಕಾರ್ಯಕ್ರಮ ವಿರೋಧ ಮಾಡಿದ್ದು ಕಾಂಗ್ರೆಸ್‍ನವರೇ ಹೊರತು, ನಾವಲ್ಲಾ. ಬಿಜೆಪಿ ಜನಪರ ಕಾರ್ಯ ಕ್ರಮಗಳ ಬಗ್ಗೆ ರಾಜ್ಯಾದ್ಯಂತ ಕಾರ್ಯಕ್ರಮ ಮಾಡಲಿದೆ. ಆ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ದಾವಣಗೆರೆಯಲ್ಲಿ ಮಾಡಲು ಸಿಎಂಗೆ ವಿನಂತಿ ಮಾಡುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published.