ಸಿದ್ದರಾಮಯ್ಯ ಸರ್ಕಾರದಲ್ಲಿ ಪಠ್ಯ ಪರಿಷ್ಕರಣೆಯಾದಾಗ ಯಾರು ಯಾಕೆ ಧ್ವನಿ ಎತ್ತಲಿಲ್ಲ: ಸಚಿವ ಆರ್ ಅಶೋಕ್

ರಾಜಕೀಯ

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದಲ್ಲಿ ಪಠ್ಯ ಪರಿಷ್ಕರಣೆಯಾದಾಗ ಯಾರು ಯಾಕೆ ಧ್ವನಿ ಎತ್ತಲಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಪ್ರಶ್ನಿಸಿದರು. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರವು ಕೆಲವು ಪಠ್ಯಗಳನ್ನು ತೆಗೆದು ಹಾಕಿದ್ದಾವೆ. ಇವರಿಗೆ ರಾಮ, ಈಶ್ವರ ಹೆಸರು ಕೇಳಲು ಇಷ್ಟವಿರಲ್ಲ. ಹಿಂದೆ ಅವರಿಗೆ ಬೇಕಾದಂತೆ ಪಠ್ಯ ಪರಿಷ್ಕರಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೂ ನಮ್ಮ ಸರ್ಕಾರದ ಪಠ್ಯಪರಿಷ್ಕರಣೆ ಅವಧಿಯಲ್ಲಿ ಕುವೆಂಪು ಅವರ 8 ಪದ್ಯಗಳನ್ನು ಸೇರಿಸಲಾಗಿದೆ. ಹಿಡನ್ ಅಜೆಂಟ್ ಇರುವ ಕೆಲ ಸಾಹಿತಿಗಳು ಭ್ರಮೆಯಲ್ಲಿದ್ದಾರೆ. ಹಿಂದುಗಳು ಮಲಗಿದ್ದರೆ ದೇಶ ಮಲಗಿರುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವಧಿಯಲ್ಲ ಪಠ್ಯ ಪುಸ್ತಕಗಳು ಬದಲಾವಣೆಯಾಗಿವೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಯಾರೂ ಯಾಕೆ ಧ್ವನಿ ಎತ್ತಲಿಲ್ಲ ಎಂದು ಸಚಿವರು ಹೇಳಿದ್ದಾರೆ.

Leave a Reply

Your email address will not be published.