ಯಾವ ಜ್ಯೂಸ್ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು ಯಾವುದು ಕೆಟ್ಟದ್ದು.? ಇಲ್ಲಿದೆ ನೋಡಿ

ಲೈಫ್ ಸ್ಟೈಲ್

ಬೇಸಿಗೆ ಕಾಲ​ ಬಂತು ಅಂದ್ರೆ ಸಾಕು.. ಬಿರುಬಿಸಿಲು ಜನರನ್ನ ಹೈರಾಣಿಸಿ ಬಿಡುತ್ತೆ. ಬಿಸಿಲಿನ ದಾಹ ತಪ್ಪಿಸಿಕೊಳ್ಬೇಕು ಅಂತಾ ನಾನಾ ಜ್ಯೂಸ್​ಗಳ ಮೊರೆಹೋಗ್ತೀರಾ.ಯಾವ ಜ್ಯೂಸ್​ ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು ಯಾವುದು ಕೆಟ್ಟದ್ದು ಅಂತಾ ಥಿಂಕ್​ ಮಾಡ್ತಿದೀರಾ..? ಇಲ್ಲಿದೆ ನೋಡಿ ನಿಮ್ಮ ಸಮ್ಮರ್​ ಹೀಟ್​ನ್ನು ಬೀಟ್​​ ಮಾಡೋದ್ರ ಜತೆಗೆ ಆರೋಗ್ಯವನ್ನೂ ಸಮೃದ್ಧಿಸೋ ಜ್ಯೂಸ್​ಗಳು

ಕಿತ್ತಳೆ ಹಣ್ಣಿನ ಜ್ಯೂಸ್​ಗಳು ಬೇಸಿಗೆ ದಾಹ ಕಡಿಮೆ ಮಾಡೋಕೆ ಅತ್ಯಂತ ಸಹಕಾರಿ.ಈ ಜ್ಯೂಸ್​ನ್ನ ತಯಾರಿಸೋದೂ ತುಂಬಾನೆ ಈಸಿ.ಅಲ್ಲದೇ ಈ ಜ್ಯೂಸ್​ ಕುಡಿಯೋದ್ರಿಂದ ನಿಮ್ಮ ದೇಹಕ್ಕೆ ವಿಟಮಿನ್​ ಸಿ ಹೇರಳವಾಗಿ ಲಭಿಸಲಿದೆ.

ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ, ಕ್ಯಾನ್ಸರ್​ ಪೀಡಿತರಿಗೆ ದ್ರಾಕ್ಷಿ ಅದರಲ್ಲೂ ಕಪ್ಪು ದ್ರಾಕ್ಷಿ ಸೇವನೆ ಆರೋಗ್ಯವೃದ್ಧಿಗೆ ತುಂಬಾನೆ ಸಹಕಾರಿ. ಡಯಾಬಿಟೀಸ್​ ಇರುವವರೂ ಕೂಡ ದ್ರಾಕ್ಷಿ ಜ್ಯೂಸ್​ಗೆ ಸಕ್ಕರೆ ಬಳಸುವ ಬದಲು ಜೇನುತುಪ್ಪ ಬೆರೆಸಿ ಈ ಜ್ಯೂಸ್​ ಸೇವಿಸಸಬಹುದು.

ನೀವು ಡಯಟ್​ ಮಾಡೋರಾಗಿದ್ರೆ ಈ ಜ್ಯೂಸ್​ ನಿಮಗೆ ತುಂಬಾನೆ ಸೂಟ್​ ಆಗುತ್ತೆ. ಬೆಳಗ್ಗೆ ಬ್ರೇಕ್​ಫಾಸ್ಟ್​ ಟೈಂನಲ್ಲೇ ನೀವು ಈ ಜ್ಯೂಸ್​ ಸೇವಿಸಬಹುದು. 0% ಕೊಲೆಸ್ಟ್ರಾಲ್​ ಹೊಂದಿರೋ ಸೌತೆಕಾಯಿ ಜ್ಯೂಸ್ ನಾಲಗೆಗೆ ಅಂತಾ ರುಚಿ ನೀಡದಿದ್ದರೂ ಎಲ್ಲಾ ವಯೋಮಾನದವರಿಗೆ ಹೇಳಿಮಾಡಿಸಿದಂತಿರುತ್ತೆ.

ಬೇಸಿಗೆಕಾಲದಲ್ಲಿ ಹೆಚ್ಚಿನ ಜನರು ಕಲ್ಲಂಗಡಿ ಹಣ್ಣಿನ ಮೊರೆಹೋಗ್ತಾರೆ. ಚರ್ಮ ಖಾಯಿಲೆ , ಕ್ಯಾನ್ಸರ್​ ಖಾಯಿಲೆ ಹಾಗೂ ಅಧಿಕ ರಕ್ತದೊತ್ತಡ ಇರುವವರು ಈ ಜ್ಯೂಸ್​ ಸೇವಿಸಿದ್ರೆ ಒಳ್ಳೆಯದು.

ಆಪಲ್​ ಅ ಡೇ ಕೀಪ್ಸ್​ ಅ ಡಾಕ್ಟರ್​​ ಅವೇ ಎಂಬ ಮಾತು ನಿಮಗೆ ತಿಳಿದಿರಬಹುದು. ಹೇರಳವಾದ ಪೋಷಕಾಂಶಗಳನ್ನೊಳಗೊಂಡ ಈ ಹಣ್ಣು ದೃಷ್ಠಿ ಸಮಸ್ಯೆ ಇರುವವರಿಗೆ, ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ದೇಹದಲ್ಲಿ ಉತ್ತಮ ರಕ್ತಸಂಚಾರಕ್ಕೆ ಅತ್ಯಂತ ಉಪಯೋಗಕಾರಿ.

ನೈಸರ್ಗಿಕವಾಗಿ ಬೆಳಸಲಾದ ಎಲ್ಲಾ ಹಣ್ಣುಗಳು ಆರೋಗ್ಯಕ್ಕೆ ಉಪಯೋಗಕಾರಿ. ಅದೇ ರೀತಿ ನೀವು ತಯಾರಿಸುವ ಜ್ಯೂಸ್ ಕೂಡಾ ನೈಸರ್ಗಿಕವಾಗಿರಲಿ. ಆದಷ್ಟು ಜ್ಯೂಸ್​ಗಳಿಗೆ ಸಕ್ಕರೆ ಬದಲಾಗಿ ಜೇನುತುಪ್ಪ ಬಳಸೋದನ್ನ ರೂಢಿಸಿಕೊಳ್ಳಿ. ಯಾವುದಾದರೂ ಖಾಯಿಲೆಯಿಂದ ಬಳಲುತ್ತಿದ್ದರೆ ನಿಮ್ಮ ಫ್ಯಾಮಿಲಿ ಡಾಕ್ಟರ್​ನ್ನ ಒಮ್ಮೆ ಸಂಪರ್ಕಿಸಿ ,ನಿಮ್ಮ ದೇಹಕ್ಕೆ ಸೂಕ್ತವಾಗುವಂತ ಹಣ್ಣಿನ ರಸವನ್ನ ಸೇವಿಸಿ.

Leave a Reply

Your email address will not be published.