ಯೂರಿ ಅಲೆಮಾವೊ ಗೋವಾ ಸಿಎಲ್‌ಪಿ ನಾಯಕರಾಗಿ ನೇಮಕ

ರಾಷ್ಟ್ರೀಯ

ನವದೆಹಲಿ: ಬಿಜೆಪಿಗೆ 8 ಮಂದಿ ಶಾಸಕರು ಸೇರ್ಪಡೆ ಬಳಿಕ ಗೋವಾ ಕಾಂಗ್ರೆಸ್ ಮಂಗಳವಾರ ಯೂರಿ ಅಲೆಮಾವೊ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ. ಯೂರಿ ಅಲೆಮಾವೊ ಅವರು ಕುಂಕೋಲಿಮ್‌ನ ಶಾಸಕರಾಗಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ‘ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಯೂರಿ ಅಲೆಮಾವೊ ಅವರನ್ನು ಗೋವಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ನೇಮಿಸಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೈಕೆಲ್ ಲೋಬೊ ಅವರನ್ನು ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೆಗೆದುಹಾಕಿತ್ತು.

ಸೆಪ್ಟೆಂಬರ್ 14 ರಂದು ಕಾಂಗ್ರೆಸ್‌ ಶಾಸಕರಾದ ಮಾಜಿ ಸಿಎಂ ದಿಗಂಬರ್ ಕಾಮತ್, ಮೈಕೆಲ್ ಲೋಬೊ, ದೇಲಿಲಾ ಲೋಬೊ, ಕೇದಾರ್ ನಾಯ್ಕ್, ರಾಜೇಶ್ ಫಾಲ್‌ದೇಸಾಯಿ, ಸಂಕಲ್ಪ್ ಅಮೋನ್ಕರ್, ರುಡಾಲ್ಫ್ ಫೆರ್ನಾಂಡಿಸ್ ಮತ್ತು ಅಲೆಕ್ಸೋ ಸಿಕ್ವೇರಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. 11 ಶಾಸಕರಲ್ಲಿ ಮೂವರು ಮಾತ್ರ ಕಾಂಗ್ರೆಸ್‌ ನಲ್ಲಿ ಉಳಿದಿದ್ರು. 8 ಶಾಸಕರು ಬಿಜೆಪಿ ಸೇರ್ಪಡೆಗೊಂಡ ಬಳಿಕ ಬಿಜೆಪಿ ಶಾಶಕರ ಸಂಖ್ಯೆ 28ಕ್ಕೇರಿದೆ. ಮಾರ್ಚ್‌ ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 20 ಶಾಸಕರು ಆಯ್ಕೆಯಾಗಿ ಇತರೆ ಸಣ್ಣ ಪುಟ್ಟ ಪಕ್ಷಗಳ ಸಹಕಾರದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ರು