Home District  ಜಿಲ್ಲಾ ಪಂಚಾಯತ್ ಸದಸ್ಯನ  ಮೇಲೆ ಮಾರಣಾಂತಿಕ ಹಲ್ಲೆ ;ಕಾರಣ ರಾಜಕೀಯ ವೈಷಮ್ಯನಾ ?

 ಜಿಲ್ಲಾ ಪಂಚಾಯತ್ ಸದಸ್ಯನ  ಮೇಲೆ ಮಾರಣಾಂತಿಕ ಹಲ್ಲೆ ;ಕಾರಣ ರಾಜಕೀಯ ವೈಷಮ್ಯನಾ ?

1917
0
SHARE

ಯಾದಗಿರಿ: ಹಾಡು ಹಗಲೆ ದುಷ್ಕರ್ಮಿಗಳು ಯಾದಗಿರಿ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.ಯಾದಗಿರಿ ನಗರದ ಚಿತ್ತಾಪುರ ರಸ್ತೆಯ ಎಸ್ ಪಿ ಕಛೇರಿ ಬಳಿ ಈ ಘಟನೆ ನಡೆದಿದ್ದು, ಮರ್ಲಿಂಗಪ್ಪ ಕರ್ನಾಳ್ ಎಂಬುವವರೆ ಹಲ್ಲೆಗೊಳಗಾದ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದಾರೆ. ಸುರಪುರ ಶಾಸಕ ರಾಜುಗೌಡ ಆಪ್ತ ಆಗಿರುವ ಮರ್ಲಿಂಗಪ್ಪ ಕರ್ನಾಳ್ ಖಾನಾಪುರ ಎಸ್ ಎಸ್ ಜಿಲ್ಲಾ ಪಂಚಾಯತ ಕ್ಚೇತ್ರದಿಂದ ಚುನಾಯಿತರಾಗಿ, ವಿರೋಧ ಪಕ್ಷದ ನಾಯಕರು ಕೂಡ ಆಗಿದ್ದರು.

ಕಾರಿನಲ್ಲಿ ಬಂದ ಮೂರು ಜನ ಹಂತಕರು ತಲವಾರ್ ಮತ್ತು ಮಚ್ಚಿನಿಂದ ಮರ್ಲಿಂಗಪ್ಪ ಕರ್ನಾಳ್ ರನ್ನ ಬರ್ಬರವಾಗಿ ಕೊಚ್ಚಿ ಕೊಲೆಗೈಯಲ್ಲು ಯತ್ನಿಸಿದ್ದಾರೆ.ರಕ್ತ ಮಡಿಲಿನಲ್ಲಿ ಬಿದ್ದಿರುವ ಮರ್ಲಿಂಗಪ್ಪ ಅವರನ್ನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ರಾಜಕೀಯ ವೈಷಮ್ಯದ ಹಿನ್ನೆಲೆ ಈ ಹಲ್ಲೆ ನಡೆದಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಯಾದಗಿರಿ ಎಸ್ ಪಿ ಋಷಿಕೇಶ್ ಭಗವಾನ ಸೋನಾವಣೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here